ಜ್ಯುವೆಲ್ಲರಿ ವಂಚನೆ ಪ್ರಕರಣ : ಎನ್‌ಪೋರ್ಸ್‌ಮೆಂಟ್ ತನಿಖೆ ಆರಂಭ; ಡೈರೆಕ್ಟರ್‌ಗಳ ಸೊತ್ತು ಪರಿಶೀಲನೆ

0
58

ಕಾಸರಗೋಡು: ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಆರೋಪಿಯಾಗಿರುವ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದಲ್ಲಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ತನಿಖೆ ಆರಂಭಿಸಿದೆ. ಇದರಂಗವಾಗಿ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣಗಳ ಪ್ರಾಥಮಿಕ ಮಾಹಿತಿಗಳನ್ನು ಎನ್ ಫೋರ್ಸ್‌ಮೆಂಟ್ ಸಂಗ್ರಹಿಸಿದೆ. ವಂಚನೆಗೆ ಸಂಬಂಧಿಸಿ ಅತೀ ಹೆಚ್ಚು ಕೇಸುಗಳು ದಾಖಲಾಗಿರುವ ಚಂದೇರ ಠಾಣೆ ಪೊಲೀಸರಿಂದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ತನಿಖೆಯಂಗವಾಗಿ ಫ್ಯಾಶನ್ ಗೋಲ್ಡ್  ಜ್ಯುವೆಲ್ಲರಿಯ ೪೨ ಮಂದಿ ಡೈರೆಕ್ಟರ್‌ಗಳ ಮಾಹಿತಿಗಳನ್ನು ಎನ್‌ಫೋರ್ಸ್‌ಮೆಂಟ್ ಸಂಗ್ರಹಿಸಿದ್ದು, ಡೈರೆಕ್ಟರ್‌ಗಳ ಸೊತ್ತುಗಳು, ಆದಾಯ ಮೂಲಗಳು, ಹಣ ಲಭಿಸಿದ ದಾರಿ ಮೊದಲಾದ ವಿಷಯಗಳನ್ನು ಪ್ರಧಾನವಾಗಿ ತನಿಖೆ ನಡೆಸುತ್ತಿರುವುದಾಗಿ ಸೂಚನೆಯಿದೆ. ಇದೇ ವೇಳೆ ವಂಚನೆಗೆ ಸಂಬಂಧಿಸಿದ ದೂರು ಗಳ ಕುರಿತು ತನಿಖೆ ನಡೆಸಲು ಮುಸ್ಲಿಂ ಲೀಗ್ ರಾಜ್ಯ ನಾಯಕತ್ವ ನೇಮಿಸಿದ ಕಲ್ಲಟ್ರ ಮಾಹಿನ್ ಕಮಿಶನ್ ಇಂದು ವರದಿ  ಹಸ್ತಾಂತರಿಸಲಿದೆ. ವರದಿಯಲ್ಲಿ ಶಾಸಕ ಎಂ.ಸಿ. ಖಮರುದ್ದೀನ್‌ರ ಸೊತ್ತು ಹಾಗೂ ಬಾಧ್ಯತೆಗೆ ಸಂಬಂಧಿಸಿದ ಮಾಹಿತಿಗಳು ಇದೆಯೆಂದು ಸೂಚನೆ ಇದೆ.

NO COMMENTS

LEAVE A REPLY