ಜ್ಯುವೆಲ್ಲರಿ ಠೇವಣಿ ವಂಚನೆ ಕಾಸರಗೋಡಿನಲ್ಲಿ ಇನ್ನೊಂದು ಕೇಸು ದಾಖಲು

0
25

ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದಲ್ಲಿ ಶಾಸಕ ಎಂ.ಸಿ. ಖಮರುದ್ದೀನ್ ಹಾಗೂ  ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯನೂ ಕಂಪೆನಿಯ ಎಂ.ಡಿ ಆದ ಪಿ.ಕೆ. ಪೂಕೋಯ ತಂಙಳ್ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ. ತಲಶ್ಶೇರಿ ಪಾನೂರಿನ ಅಸ್ಮ ಮೊಹಮ್ಮದ್ ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ೨೦೧೧ ನವೆಂಬರ್ ೧೫ರಂದು ೫ ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಅಸ್ಮ ಮೊಹಮ್ಮದ್ ದೂರಿದ್ದಾರೆ. ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕಾಸರಗೋಡು ಹಾಗೂ ಚಂದೇರ ಠಾಣೆಯಲ್ಲಿ ಹಲವು ಕೇಸುಗಳು ದಾಖಲಿವೆ.

NO COMMENTS

LEAVE A REPLY