ಕೇಪು ಕ್ಷೇತ್ರದಿಂದ ಹಣ, ಬೆಳ್ಳಿ ಆಭರಣ ಕಳವು: ತನಿಖೆಗೆ ಚಾಲನೆ

0
27

ಪೆರ್ಲ: ಇತಿಹಾಸಪ್ರಸಿದ್ಧ ಕಜಂಬು ಜಾತ್ರೆಗೆ ಹೆಸರಾಗಿರುವ ಕೇಪು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನದಿಂದ ನಿನ್ನೆ ಕಳವು ನಡೆಸಲಾಗಿದೆ. ಗರ್ಭಗುಡಿ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಒಡೆದು ನಗದು ಹಾಗೂ ಗರ್ಭಗುಡಿಯಲ್ಲಿದ್ದ ಬೆಳ್ಳಿಯ ಸಾಮಗ್ರಿಗಳನ್ನು ದೋಚಿದ್ದಾರೆ.

ನಿನ್ನೆ ಬೆಳಿಗ್ಗೆ ಪೂಜೆಗೆಂದು ಅರ್ಚಕ ತಲುಪಿದಾಗ ಘಟನೆ ತಿಳಿದುಬಂದಿದ್ದು, ಕೂಡಲೇ ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಲುಪಿ ತನಿಖೆ  ನಡೆಸಿದಾಗ ಕಳವು ಪ್ರಮಾಣ ತಿಳಿದುಬಂದಿದೆ. ಅರ್ಧಕಿಲೋದಷ್ಟು ಬೆಳ್ಳಿ ಆಭರಣಗಳು, ಸುಮಾರು ಏಳೂವರೆ ಸಾವಿರ ರೂ. ಕಳವು ಹೋಗಿರಬೇಕೆಂದು ಶಂಕಿಸಲಾ ಗಿದೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ತಲುಪಿದ್ದಾರೆ.

ವಿಟ್ಲ ಅರಮನೆಯ ಆಡಳಿತಕ್ಕೊಳ ಪಟ್ಟ   ಕ್ಷೇತ್ರಗಳಲ್ಲಿ ಪ್ರಮುಖ ಕ್ಷೇತ್ರವಾ ಗಿದೆ ಇದು. ಇಲ್ಲಿಗೆ ಕಳ್ಳರು ನುಗ್ಗಿರುವುದು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ. ಸಿಸಿ ಟಿವಿ ಇಲ್ಲಿ ಅಳವಡಿಸದ ಕಾರಣ ಕಳ್ಳರ ಪತ್ತೆಯೂ ಕಷ್ಟಕರವಾಗಲಿದೆಯೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

NO COMMENTS

LEAVE A REPLY