ಬೋವಿಕ್ಕಾನದ ಪತ್ರಿಕಾ ವರದಿಗಾರ ನಾಪತ್ತೆ- ದೂರು

0
38

ಮುಳ್ಳೇರಿಯ: ಬೋವಿಕ್ಕಾನದಲ್ಲಿ ಪತ್ರಿಕಾ ವರದಿಗಾರನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಸುಪ್ರಭಾತಂ ಪತ್ರಿಕೆಯ ಬೋವಿಕ್ಕಾನದ ವರದಿಗಾರ ಮೊಯ್ದೀನ್ ಕುಂಞಿ ಚಾಪ (೪೨) ನಾಪತ್ತೆಯಾಗಿರುವುದಾಗಿ ಸಹೋದರ ಅಬ್ದುಲ್ ಖಾದರ್ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಸಂಜೆಯಿಂದ ಇವರು ನಾಪತ್ತೆಯಾಗಿದ್ದಾರೆ. ವಾಟ್ಸಪ್ ಹಾಗೂ ಫೇಸ್‌ಬುಕ್‌ನಿಂದ ಫೋಟೋವನ್ನು ತೆರವುಗೊಳಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ರಾತ್ರಿ ೧೧ ಗಂಟೆಗೆ ಧರ್ಮಸ್ಥಳದಲ್ಲಿದ್ದುದಾಗಿ ಟವರ್ ಲೊಕೇಶನ್ ಪರಿಶೀಲಿಸಿ ಪೊಲೀಸರು ತಿಳಿದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.

NO COMMENTS

LEAVE A REPLY