ಹಳದಿ ಕಾಮಾಲೆಗೆ ಬಾಲಕ ಬಲಿ

0
27

ಮಂಜೇಶ್ವರ: ಹಳದಿ ಕಾಮಾಲೆಗೆ ಬಾಲಕ ಬಲಿಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಕುಂಜತ್ತೂರು ಐಗ್ಲೋದಿ ಫಿಶರೀಸ್ ಕಾಲನಿ ನಿವಾಸಿ ಮೀನು ಕಾರ್ಮಿಕ ನಾಗರಾಜ- ರುಕ್ಕುದಂಪತಿ ಪುತ್ರ ಬಾಲು (೧೩) ಪಟ್ಟ ಬಾಲಕ. ಈತ ಕುಂಜತ್ತೂರು ಶಾಲೆಯ ೮ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಸೋಮವಾರ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಔಷಧಿ ತರಲಾಗಿತ್ತು. ತಪಾಸಣೆಯಲ್ಲಿ ಹಳದಿ ಕಾಮಾಲೆ ಎಂದು ತಿಳಿದಿತ್ತು. ನಿನ್ನೆ ರೋಗ ಉಲ್ಬಣಗೊಂಡು ಮಂಗಳೂರಿನ ಆಸ್ಪತ್ರೆಗೆ ಕೊಂಡುಹೋಗುವ ಮಧ್ಯೆ ಮೃತಪಟ್ಟಿದ್ದಾನೆ. ಮೃತ ಬಾಲಕ ತಂದೆ, ತಾಯಿ, ಸಹೋದರರಾದ ರವಿ, ಮಧು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾನೆ. ಮೃತದೇಹದ ಅಂತ್ಯಸಂಸ್ಕಾರ ನಿನ್ನೆ ಉದ್ಯಾವರ ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು.

NO COMMENTS

LEAVE A REPLY