ನಗರದ ಅಂಗಡಿ ವರಾಂಡದಲ್ಲಿ ಕರ್ನಾಟಕ ನಿವಾಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

0
36

ಕಾಸರಗೋಡು: ಹಲವು ವರ್ಷಗಳ ಹಿಂದೆ ಕಾಸರಗೋಡಿಗೆ ಬಂದಿದ್ದ ಕರ್ನಾಟಕ ನಿವಾಸಿ ನಗರದ ಅಂಗಡಿ ವರಾಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕರ್ನಾಟಕದ ಹಾವೇರಿ ನಿವಾಸಿ ಚಿಕ್ಕಣ್ಣ (೬೦) ಎಂಬವರು ಮೃತಪಟ್ಟ ವ್ಯಕ್ತಿ. ನಗರದ ನುಳ್ಳಿಪ್ಪಾಡಿಯ ಅಂಗಡಿ ವರಾಂಡದಲ್ಲಿ ಇವರು  ಮಲಗಿದ ಸ್ಥಿತಿಯಲ್ಲಿದ್ದರು. ಇಂದು ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ಜತೆಗಿದ್ದ ಇನ್ನೋರ್ವ ಎಬ್ಬಿಸಲು ಯತ್ನಿಸಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.

ಚಿಕ್ಕಣ್ಣ ೧೬ ವರ್ಷಗಳ ಹಿಂದೆ ಊರುಬಿಟ್ಟು  ಕಾಸರಗೋಡಿಗೆ ಬಂದಿದ್ದರು. ಆದರೆ ಇದುವರೆಗೆ ಊರಿಗೆ ತೆರಳಿಲ್ಲವೆಂದು ಹೇಳಲಾಗುತ್ತಿದೆ. ಇವರ ಜತೆಗೆ ಓರ್ವ ಸಂಬಂಧಿಕನೂ ಇದ್ದನೆನ್ನಲಾಗುತ್ತಿದೆ. ಇಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಇವರು ರಾತ್ರಿಹೊತ್ತಿನಲ್ಲಿ ಅಂಗಡಿ ವರಾಂಡದಲ್ಲಿ ನಿದ್ರಿಸುತ್ತಿದ್ದರು. ಸಾವಿಗೆ  ಕಾರಣ ತಿಳಿದುಬಂದಿಲ್ಲ. ಇವರಿಗೆ ಊರಿನಲ್ಲಿ ಪತ್ನಿ ರತ್ನಮ್ಮ ಹಾಗೂ ಮೂವರು ಮಕ್ಕಳಿದ್ದಾರೆಂದೂ ತಿಳಿದುಬಂದಿದೆ.

 

NO COMMENTS

LEAVE A REPLY