ಬದಿಯಡ್ಕ ಪಂ. ಓರ್ವ ಸದಸ್ಯನಿಗೆ ಕೋವಿಡ್ : ಸದಸ್ಯರು ಕ್ವಾರಂಟೈನ್‌ನಲ್ಲಿರುವಂತೆ ನಿರ್ದೇಶ

0
38

ಬದಿಯಡ್ಕ: ಬದಿಯಡ್ಕ ಪಂಚಾಯತ್ ಸದಸ್ಯರು ಕ್ವಾರಂಟೈನ್‌ನಲ್ಲಿರು ವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ದೇಶಿಸಿದ್ದಾರೆ. ಬುಧವಾರ ನಡೆದ ಪಂಚಾಯತ್ ಬೋರ್ಡ್ ಸಭೆಯಲ್ಲಿ ಪಾಲ್ಗೊಂಡ ಓರ್ವ ಸದಸ್ಯನಿಗೆ ಕೋ ವಿಡ್ ದೃಢೀಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ೧೯ ಮಂದಿ ಆಡಳಿತ ಸಮಿತಿಯಲ್ಲಿ ಅಧ್ಯಕ್ಷರ ಸಹಿತ ೧೭ ಮಂದಿ ಆಡಳಿತ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಓರ್ವ ಸದಸ್ಯನಿಗೆ ನಿನ್ನೆ ರೋಗ ಖಚಿತಗೊಂಡಿದೆ. ಈ ಹಿಂದೆ ಇಲ್ಲಿನ ನೌಕರರ ಪೈಕಿ ಕೆಲವರಿಗೆ ಕೋವಿಡ್ ದೃಢೀಕರಿಸಲಾಗಿತ್ತು. ಇದೀಗಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಪಂಚಾಯತ್ ಕಚೇರಿಯಲ್ಲಿ ಕಠಿಣ ನಿಯಂತ್ರಣ ಏರ್ಪಡಿಸಲಾಗಿದೆ.  ಬದಿಯಡ್ಕ ಪೇಟೆಯ ಒಂದು ಸಸ್ಯಾಹಾರಿ ಹೋಟೆಲ್‌ನ ಮಾಲಕನಿಗೆ ರೋಗ ದೃಢೀಕರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಹೋಟೆಲ್ ಇಂದು ಮುಚ್ಚುಗಡೆಗೊಳಿಸಲಾಗಿದೆ.

NO COMMENTS

LEAVE A REPLY