ಬದಿಯಡ್ಕ ಅಡಿಂಬಾಯಿಯಲ್ಲಿ ಕೋವಿಡ್ ವ್ಯಾಪಕ: ಬೀಜಂತಡ್ಕ-ಅಡಿಂಬಾಯಿ ರಸ್ತೆ ಮುಚ್ಚುಗಡೆ

0
37

ಬದಿಯಡ್ಕ: ಚರ್ಲಡ್ಕ ಅಡಿಂ ಬಾಯಿ ಪ್ರದೇಶಗಳಲ್ಲಿ ಕೋವಿಡ್ ಹರಡುವಿಕೆ ತೀವ್ರಗೊಂಡಿದೆ. ಬದಿಯಡ್ಕ ಪಂಚಾಯತ್‌ನ ೧೧ನೇ ವಾರ್ಡ್ ನಲ್ಲೂ, ಪರಿಸರ ಪ್ರದೇಶಗಳಲ್ಲೂ ಕೋವಿಡ್ ಹರಡುವಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಬೀಜಂತಡ್ಕ-ಅಡಿಂ ಬಾಯಿ ರಸ್ತೆ ಯನ್ನು  ಅಧಿಕಾರಿಗಳು ಮುಚ್ಚುಗಡೆಗೊಳಿಸಿದ್ದಾರೆ. ೧೧ನೇ ವಾರ್ಡ್ ಸದಸ್ಯನಿಗೂ ಇತ್ತೀಚೆಗೆ ಕೋವಿಡ್ ದೃಢೀಕರಿಸಲಾಗಿತ್ತು. ಅದರ ಬೆನ್ನಲ್ಲೇ ಇನ್ನಷ್ಟು ಮಂದಿಗೆ ರೋಗ ಬಾಧಿಸಿರುವುದಾಗಿ ತಿಳಿದುಬಂದಿದೆ. ಈ ಭಾಗದ ೫೦ರಷ್ಟು ಮಂದಿಯನ್ನು ಇಂದು ಕೋವಿಡ್ ತಪಾಸಣೆಗೊಳಪಡಿಸಲಾಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY