ವಾಂತಿ: ಬಾಲಕಿ ಮೃತ್ಯು

0
39

ಉಪ್ಪಳ: ೫ನೇ ತರಗತಿ ವಿದ್ಯಾ ರ್ಥಿನಿ ಅಸೌಖ್ಯ ನಿಮಿತ್ತ ನಿಧನ ಹೊಂದಿದ್ದಾಳೆ. ಪ್ರತಾಪನಗರ ನಿವಾಸಿ ದೀಪಕ್ ಕುಮಾರ್ ಆಚಾರ್ಯ- ಭುವನೇಶ್ವರಿ ದಂಪತಿ ಪುತ್ರಿ ಉದಯ ಹೈಯರ್ ಸೆಕೆಂಡರಿ ಶಾಲೆಯ ೫ನೇ ತರಗತಿ ವಿದ್ಯಾರ್ಥಿ ನಿ ನಿರೀಕ್ಷ (೧೧) ನಿನ್ನೆ ರಾತ್ರಿ ನಿಧನ ಹೊಂದಿದ್ದಾಳೆ. ಮೊನ್ನೆ ರಾತ್ರಿ ವಾಂತಿ ಹಿನ್ನೆಲೆಯಲ್ಲಿ ಉಪ್ಪಳದ ಆಸ್ಪತ್ರೆಗೆ ಕೊಂಡುಹೋಗಿ ಚಿಕಿತ್ಸೆ ಪಡೆಯ ಲಾಗಿತ್ತು. ಆದರೆ ನಿನ್ನೆ ರಾತ್ರಿ ರೋಗ ಉಲ್ಬಣಗೊಂಡಿದ್ದು, ಮತ್ತೆ ಆಸ್ಪತ್ರೆಗೆ ಕೊಂಡುಹೋದ ಅಲ್ಪ ಹೊತ್ತಿನಲ್ಲಿ ನಿಧನ ಹೊಂದಿದ್ದಾಳೆ. ಮೃತ ಬಾಲಕಿ ತಂದೆ, ತಾಯಿ, ಸಹೋ ದರ ರಿಶಿಬ್ ಸಹಿತ ಬಂಧು-ಬಳಗವನ್ನು ಅಗಲಿದ್ದಾಳೆ.

NO COMMENTS

LEAVE A REPLY