ಶಬರಿಮಲೆ, ಮಾಳಿಗಪುರಂ  ಮುಖ್ಯ ಅರ್ಚಕರ ಆಯ್ಕೆ

0
33

ಶಬರಿಮಲೆ: ಶಬರಿಮಲೆ ಕ್ಷೇತ್ರ ಮುಖ್ಯ ಅರ್ಚಕರಾಗಿ ವಿ.ಕೆ. ಜಯರಾಜ್ ಪೋಟಿ, ಮಾಳಿಗ ಪುರಂ ಮುಖ್ಯ ಅರ್ಚಕರಾಗಿ ಎಂ.ಎನ್. ರಜಿ ಕುಮಾರ್ ಆಯ್ಕೆಗೊಂಡಿದ್ದಾರೆ.

ಶಬರಿಮಲೆ, ಮಾಳಿಗಪುರಂ ಕ್ಷೇತ್ರದಲ್ಲಿ ಮುಂದಿನ ಒಂದು ವರ್ಷಕ್ಕಿರುವ ಮುಖ್ಯ ಅರ್ಚಕರನ್ನು ಇಂದು ಬೆಳಿಗ್ಗೆ ಚೀಟಿ ಎತ್ತುವ ಮೂಲಕ ಆರಿಸಲಾಯಿತು. ವಾರಿಕ್ಕಾಟ್ ಮಠತ್ತಿಲ್ ಜಯರಾಜ್ ಪೋಟಿಯವರು ತೃಶೂರು ಕೊಡುಂಗಲ್ಲೂರು ನಿವಾಸಿಯಾಗಿದ್ದಾರೆ. ೨೦೦೫-೦೬ ವರ್ಷದಲ್ಲಿ ಅವರು ಮಾಳಿಗಪುರಂ ಮುಖ್ಯ ಅರ್ಚಕರಾಗಿದ್ದರು. ಎಂ.ಎನ್. ರಜಿ ಕುಮಾರ್ ಎರ್ನಾಕುಳಂ ಅಂಗಮಾಲಿ ಕಿಡಂಗೂರ್ ನಿವಾಸಿಯಾಗಿದ್ದಾರೆ. ಶಬರಿಮಲೆ ಮುಖ್ಯ ಅರ್ಚಕರ ಅಂತಿಮ ಪಟ್ಟಿಯಲ್ಲಿ ಒಂಭತ್ತು ಮಂದಿ, ಮಾಳಿಗಪುರಂ ಮುಖ್ಯ ಅರ್ಚಕ ಪಟ್ಟಿಯಲ್ಲಿ ಹತ್ತು ಮಂದಿಯಿದ್ದರು.

NO COMMENTS

LEAVE A REPLY