ಸಚಿವ ಕೆ.ಟಿ. ಜಲೀಲ್‌ರ ಗನ್‌ಮೆನ್‌ನ ಫೋನ್ ಕಸ್ಟಮ್ಸ್ ಕಸ್ಟಡಿಗೆ

0
34

ಮಲಪ್ಪುರಂ: ಸಚಿವ ಕೆ.ಟಿ. ಜಲೀಲ್‌ರ ಗನ್‌ಮೆನ್‌ನ ಮೊಬೈಲ್ ಫೋನ್ ಕಸ್ಟಮ್ಸ್ ಕಸ್ಟಡಿಗೆ ತೆಗೆದುಕೊಂಡಿದೆ. ಗನ್‌ಮೆನ್ ಪ್ರಜೀಶ್‌ರ ಫೋನ್‌ನ್ನು ಕಸ್ಟಮ್ಸ್ ಕಸ್ಟಡಿಗೆ ತೆಗೆದಿ ರುವುದಾಗಿ ತಿಳಿಸಲಾಗಿದೆ. ಎರಡು ದಿನಗಳ ಹಿಂದೆ ಎಡಪ್ಪಾ ಲ್‌ನಲ್ಲಿರುವ ಮನೆಗೆ ಕಸ್ಟಮ್ಸ್ ಅಧಿಕಾರಿಗಳು ತಲುಪಿ ಫೋನ್ ವಶಕ್ಕೆ ತೆಗೆದುಕೊಂಡಿದ್ದಾರೆ.  ಅಲ್ಲದೆ ಪ್ರಜೀಶ್‌ರ ಇಬ್ಬರು ಸ್ನೇಹಿತರನ್ನು ತನಿಖೆಗೊಳ ಪಡಿಸಲಾಗಿದೆ ಎನ್ನಲಾಗುತ್ತಿದೆ. ಚಿನ್ನ ಸಾಗಾಟ  ಪ್ರಕರಣದ ಆರೋಪಿ ಸರಿತ್‌ಗೆ ಪ್ರಜೀಶ್‌ರ ಫೋನ್‌ನಿಂದ ಕರೆ ಮಾಡಿದ ಬಗ್ಗೆ ಮಾಹಿತಿಗಳು ಈ ಹಿಂದೆಯೇ ಬಹಿರಂಗಗೊಂಡಿತ್ತು. ರಂಜಾನ್ ಕಿಟ್ ವಿತರಣೆಯ ಹಣ ವ್ಯವಹಾರಕ್ಕೆ ಸಂಬಂಧಿಸಿದ ಫೋನ್ ಕರೆ ವಿವಾದಗಳು ನೆಲೆ ಗೊಂಡಿದ್ದು ಇದೇ ಸಂದರ್ಭದಲ್ಲಿ ಕಸ್ಟಮ್ಸ್  ಫೋನ್ ಕಸ್ಟಡಿಗೆ ತೆಗೆದುಕೊಂಡಿದೆ.

NO COMMENTS

LEAVE A REPLY