ಭಕ್ತಿ ಸಡಗರದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ

0
42

ಕಾಸರಗೋಡು: ದುಷ್ಟ ನಿಗ್ರಹ ಶಿಷ್ಟರ ರಕ್ಷಣೆಗಾಗಿ ದೇವಿ ವಿವಿಧ ರೂಪಗಳನ್ನು ತಾಳಿ ರಕ್ಕಸರ ನಿಗ್ರಹ ಮಾಡಿದ ದಿನಗಳ ಸ್ಮರಣೆಯಾಗಿದೆ ನವರಾತ್ರಿ. ಇದರಂತೆ ದೇಶದಾದ್ಯಂತ ಸಂಭ್ರಮ ಸಡಗರದಿಂದ ಪ್ರತಿ ವರ್ಷ ನವರಾತ್ರಿ ಆಚರಿಸಲ್ಪಡುತ್ತಿದ್ದರೆ, ಈ ಬಾರಿ ಕೊರೊನಾದ ಕರಿನೆರಳು ನವರಾತ್ರಿಗೂ ಬಾಧಿಸಿದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯನ್ನು ಭಕ್ತಿಯಿಂದ ಸೀಮಿತ ಜನರ ಪಾಲ್ಗೊಳ್ಳುವಿಕೆಯೊಂದಿಗೆ ವೈದಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿ ನಡೆಸಲಾಗುತ್ತಿದೆ.

ಜಿಲ್ಲೆಯ ವಿವಿಧ ದೇವಿ ದೇವ ಸ್ಥಾನಗಳಲ್ಲಿ ನವರಾತ್ರಿ ಉತ್ಸವ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಕೊರ ಕೋಡು ಶ್ರೀ ಆರ್ಯಕಾತ್ಯಾಯಿನಿ ಕ್ಷೇತ್ರ, ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ, ಮುಂ ಡೋಳು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ,  ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ, ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರ, ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ, ಕನಿಲ ಶ್ರೀ ಭಂಡಾರ ನಿಲಯ ಸಹಿತ ದೇವಿಯನ್ನು ಪೂಜಿಸುವ ಮಠ, ಮಂದಿರಗಳಲ್ಲೂ ನವರಾತ್ರಿ ಪೂಜೆ ಯನ್ನು ಸಾಂಕೇತಿಕವಾಗಿ ಆಚರಿಸ ಲಾಗುತ್ತಿದೆ.

ನವರಾತ್ರಿಯಂಗವಾಗಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವಿಶೇಷ ಪೂಜೆ, ಗಣಪತಿ ಹೋಮ, ಚಂಡಿಕಾ ಹೋಮಗಳು ನಡೆಯುತ್ತಿದೆ.

ನವರಾತ್ರಿಯ ಕೊನೆಯ ದಿನವಾದ ನವಮಿಯಂದು ಆಯುಧ ಪೂಜೆ, ಮರುದಿನ ದಶಮಿಯಾಗಿದ್ದು, ವಿದ್ಯಾರಂಭ ನಡೆಯಲಿದೆ. ಕಳೆದ ವರ್ಷಗಳಲ್ಲಿ ಸಂಭ್ರಮದಿಂದ ಅನ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನಡೆಯುತ್ತಿದ್ದ ನವರಾತ್ರಿ ಈ ಬಾರಿ ಹೆಚ್ಚಿನ ಆಕರ್ಷಣೆ ರಹಿತವಾಗಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ.

ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಮಹಾಪೂಜೆ, ಸಂಜೆ ೬ಕ್ಕೆ ದೀಪಾರಾಧನೆ, ಭಜನೆ, ರಾತ್ರಿ ೭.೩೦ಕ್ಕೆ ದುರ್ಗಾಪೂಜೆ, ಮಹಾಪೂಜೆ, ೨೪ರಂದು ಬೆಳಿಗ್ಗೆ ೮.೩೦ಕ್ಕೆ ವಾಹನಪೂಜೆ, ರಾತ್ರಿ ೮ಕ್ಕೆ ಆಯುಧಪೂಜೆ, ೨೫ರಂದು ಬೆಳಿಗ್ಗೆ ೯ಕ್ಕೆ ಚಂಡಿಕಾಹೋಮ, ರಾತ್ರಿ ೭.೩೦ಕ್ಕೆ ದುರ್ಗಾಪೂಜೆ, ೨೬ರಂದು ಬೆಳಿಗ್ಗೆ ೮ಕ್ಕೆ ವಿದ್ಯಾರಂಭ ನಡೆಯಲಿದೆ.

NO COMMENTS

LEAVE A REPLY