ವಿದೇಶಕ್ಕೆ ಡಾಲರ್ ಸಾಗಿಸಿದ ಪ್ರಕರಣದಲ್ಲೂ ಶಿವಶಂಕರ್ ಶಾಮೀಲು-ಕಸ್ಟಮ್ಸ್

0
42

ಕೊಚ್ಚಿ: ದೇಶದಿಂದ ಅನಧಿಕೃತವಾಗಿ ವಿದೇಶಕ್ಕೆ ಡಾಲರ್ ಸಾಗಿಸಿದ ಪ್ರಕರಣದಲ್ಲೂ ಚಿನ್ನ ಸಾಗಾಟ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್‌ಳೊಂದಿಗೆ ಎಂ. ಶಿವಶಂಕರ್  ಶಾಮೀಲಾಗಿದ್ದಾರೆಂದು ಕಸ್ಟಮ್ಸ್ ತಿಳಿಸುತ್ತಿದೆ.

ವಿದೇಶಕ್ಕೆ ೧.೯೦ ಲಕ್ಷ ಯು.ಎಸ್. ಡಾಲರ್ ಸಾಗಿಸಲಾಗಿದೆ. ಈ ಡಾಲರ್ ಸಿಗಲು ಬ್ಯಾಂಕ್ ಅಧಿಕಾರಿಗಳಿಗೆ ಒತ್ತಡ ಹೇರಿರುವುದು ಶಿವಶಂಕರ್ ಆಗಿದ್ದಾರೆಂದು  ಕಸ್ಟಮ್ಸ್‌ಗೆ ಮಾಹಿತಿ ಲಭಿಸಿದೆಯೆನ್ನಲಾಗುತ್ತಿದೆ. ಭಾರೀ ಒತ್ತಡದ ಹಿನ್ನೆಲೆಯಲ್ಲಿ ಡಾಲರ್ ಹಸ್ತಾಂತರಿಸಿರುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ. ಈ ಹಣವನ್ನು ಬಳಿಕ ಕವಡಿಯಾರ್‌ನಲ್ಲಿ ಕಾನ್ಸುಲೇಟ್‌ನ ಹಣಕಾಸು ವಿಭಾಗಗಳ ಹೊಣೆಗಾರಿಕೆ ವಹಿಸಿದ್ದ ಖಾಲಿದ್‌ಗೆ ಹಸ್ತಾಂತರಿಸಲಾಗಿತ್ತು. ಖಾಲಿದ್ ಈ ಹಣವನ್ನು ವಿದೇಶಕ್ಕೆ ಸಾಗಿಸಿದ್ದನೆನ್ನಲಾಗಿದೆ.  ಈ ವ್ಯವಹಾರಕ್ಕೆ ಸ್ವಪ್ನಾ ಸುರೇಶ್, ಸಂದೀಪ್ ನಾಯರ್, ಎಂ. ಶಿವಶಂಕರ್ ಎಂಬಿವರು ಗೂಢಾಲೋಚನೆ ನಡೆಸಿ ದ್ದಾರೆಂದು ಕಸ್ಟಮ್ಸ್  ಪತ್ತೆಹಚ್ಚಿದೆ. ಇದರ ಆಧಾರದಲ್ಲಿ ಎರಡು ಬಾರಿ ಶಿವ ಶಂಕರ್‌ರನ್ನು ತನಿಖೆಗಾಗಿ ಕರೆಸಲಾಗಿದೆ. ಆದರೆ ಎರಡು ಬಾರಿಯೂ ಶಿವಶಂಕರ್ ತನಿಖೆಗೆ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಸಲಹೆ ಪಡೆದ ಕಸ್ಟಮ್ಸ್ ಶಿವಶಂಕರ್‌ರನ್ನು ಪ್ರಕರಣದಲ್ಲಿ ಆರೋಪಿಯಾಗಿಸುವ ಯತ್ನ ಆರಂಭಿಸಿತ್ತೆನ್ನಲಾಗಿದೆ. ಮೊದಲ ಹಂತದ ತನಿಖೆ ನಡೆಸಿದ ಬಳಿಕ ಬಂಧಿಸಲು ಉದ್ದೇಶಿಸಲಾಗಿತ್ತೆನ್ನಲಾಗಿದೆ.  ಈ ಕ್ರಮಕ್ಕೆ ಕಸ್ಟಮ್ಸ್ ಮುಂದಾದಾಗ ಶಿವಶಂಕರ್‌ಗೆ ಅಸ್ವಸ್ಥತೆಯುಂಟಾಗಿ ರುವುದಾಗಿ ಹೇಳಲಾಗುತ್ತಿದೆ.

ಸ್ವಪ್ನಾ ಸುರೇಶ್ ವಿದೇಶಕ್ಕೆ ಡಾಲರ್ ಸಹಿತ ವಿದೇಶ ನಾಣ್ಯ ಸಾಗಿಸಿದ ಪ್ರಕರಣದಲ್ಲಿ ಎಮಿಗ್ರೇಶನ್ ವಿಭಾಗದಿಂದ ಕಸ್ಟಮ್ಸ್ ಮಾಹಿತಿ ಸಂಗ್ರಹಿಸಿರುವುದಾಗಿ ಹೇಳಲಾಗುತ್ತಿದೆ.

NO COMMENTS

LEAVE A REPLY