ಕೋವಿಡ್ ಬಾಧಿಸಿ ಕಾಸರಗೋಡಿನಲ್ಲಿ ನಿವೃತ್ತ ವೈದ್ಯ ಸಹಿತ ಇಬ್ಬರು ಮೃತ್ಯು

0
153

ಕಾಸರಗೋಡು: ಕೋವಿಡ್ ಬಾಧಿಸಿ ಕಾಸರಗೋಡಿನಲ್ಲಿ  ನಿವೃತ್ತ ವೈದ್ಯರ ಸಹಿತ ಇಬ್ಬರು  ಮೃತಪಟ್ಟರು.

ಕಾಸರಗೋಡು ಜನರಲ್ ಆಸ್ಪ ತ್ರೆಯ ನಿವೃತ್ತ ಶಿಶುರೋಗ ತಜ್ಞರೂ ಬೀ ರಂತಬೈಲು ಐಎಂಎ ಹಾಲ್ ಸಮೀಪ ವಾಸಿಸುವ ಡಾ| ಸತೀಶ್ ಶ್ಯಾನುಭೋಗ್ (೬೬)  ಹಾಗೂ ತಳಂಗರೆ ಸಿರಾಮಿಕ್ಸ್ ರೋಡ್‌ನ ಶಾಂಭವಿ (೬೪) ಎಂಬವರು  ಮೃತಪಟ್ಟವರಾಗಿದ್ದಾರೆ. ಡಾ| ಸತೀಶ್ ಶ್ಯಾನುಭೋಗ್ ಅವರಿಗೆ  ಐದು ದಿನಗಳ ಹಿಂದೆ  ಅಸೌಖ್ಯ ಬಾಧಿಸಿತ್ತು. ಇದರಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟರು. ಬಳಿಕ ನಡೆಸಿದ ತಪಾಸಣೆ ವೇಳೆ ಇವರಿಗೆ ಕೋವಿಡ್ ದೃಢೀಕರಿಸಲಾಗಿದೆ.

ಮೂಲತಃ ಕರ್ನಾಟಕದ ಪಡು ಬಿದ್ರೆ ನಿವಾಸಿಯಾದ ಡಾ| ಸತೀಶ್  ಶ್ಯಾನುಭೋಗ್   ಮೊದಲು ವಯನಾ ಡಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆಗೆ ಸೇರ್ಪಡೆಗೊಂಡರು. ಬಳಿಕ ಕಾಸರಗೋಡು  ಜನರಲ್ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದರು. ಹಲವು ವರ್ಷಗಳ ಕಾಲ ಇಲ್ಲಿ ಶಿಶುರೋಗ ತಜ್ಞ ನಾಗಿ ಸೇವೆ ಸಲ್ಲಿಸಿ  ಇವರು   ನಿವೃತ್ತಿ ಹೊಂದಿದ್ದರು. ಅನಂತರ ಖಾಸಗಿಯಾಗಿ ಸೇವೆ ಸಲ್ಲಿಸುತ್ತಿದ್ದ್ದರೆನ್ನಲಾಗಿದೆ.

ಮೃತರು ಪತ್ನಿ ಡಾ| ನಯನ, ಮಕ್ಕಳಾದ ಸಿದ್ಧಾರ್ಥ್ (ಅಮೇರಿಕದಲ್ಲಿ ಇಂಜಿನಿಯರ್), ಸುಶ್ಮಿತಾ (ಬೆಂ ಗಳೂರಿನಲ್ಲಿ ಇಂಜಿನಿಯರ್), ಸಹೋದರ-ಸಹೋದರಿಯರಾದ ಜನಾರ್ದನ ರಾವ್, ಸುರೇಶ್, ಸುಭಾ ಷ್, ಅನುಸೂಯ ಮೊದ ಲಾದವರನ್ನು ಅಗಲಿದ್ದಾರೆ.

ತಳಂಗರೆ ಸಿರಾಮಿಕ್ಸ್ ರೋಡ್‌ನ ಶಾಂಭವಿ ಅವರಿಗೆ ಕಿಡ್ನಿ ಸಂಬಂಧ ಅಸೌಖ್ಯವಿತ್ತೆನ್ನಲಾಗಿದೆ. ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆಯಲ್ಲಿ ಅವರಿಗೆ ಕೋವಿಡ್ ದೃಢಗೊಂಡಿತ್ತು. ಚಿಕಿತ್ಸೆ ಮಧ್ಯೆ ಅವರು ಮೃತಪಟ್ಟರು.

ಈ ಇಬ್ಬರ  ನಿಧನದೊಂದಿಗೆ ಕಾಸರಗೋಡು ಜಿಲ್ಲೆಯಲ್ಲ್ಲಿ ಕೋವಿಡ್ ಬಾಧಿಸಿ  ಮೃತಪಟ್ಟವರ ಸಂಖ್ಯೆ ೧೬೪ಕ್ಕೇರಿದೆ.

NO COMMENTS

LEAVE A REPLY