ಹೃದಯಾಘಾತ: ಆಟೋ ಚಾಲಕ ನಿಧನ

0
71

ಮಂಜೇಶ್ವರ: ವರ್ಕಾಡಿ ದೈಗೋಳಿಯಲ್ಲಿ ಹಲವು ವರ್ಷಗಳಿಂದ ಆಟೋರಿಕ್ಷಾ ಚಾಲಕನಾಗಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟರು. ಮಡ್ವ ಮಿತ್ತಮೂಲೆ ನಿವಾಸಿ ದಿ| ಸಂಕಪ್ಪ ಮೂಲ್ಯರ ಪುತ್ರ ಆಟೋಚಾಲಕ ಸತೀಶ (೩೮) ಮೃತಪಟ್ಟವರು. ನಿನ್ನೆ ರಾತ್ರಿ ಸುಮಾರು ೮.೩೦ರ ವೇಳೆ ಮನೆಯಲ್ಲಿ ಎದೆನೋವು ಕಂಡು ಬಂದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡುಹೋಗುವ ಮಧ್ಯೆ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತರು ತಾಯಿ ದೇವಕಿ, ಪತ್ನಿ ಸುಜಾತ, ಸಹೋದರ ಪ್ರಸಾದ್, ಸಹೋದರಿ ಶ್ಯಾಮಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಪಂ. ಸದಸ್ಯ ಗೋಪಾಲಕೃಷ್ಣ ಪಜ್ವ ಭೇಟಿ ನೀಡಿ ಸಂತಾಪ ಸೂಚಿಸಿದರು.

NO COMMENTS

LEAVE A REPLY