ಪೊಲೀಸರು ಕೋವಿಡ್ ಮುಕ್ತ ನಗರಠಾಣೆಯಲ್ಲಿ ನಿಯಂತ್ರಣ ಸಡಿಲಿಕೆ

0
38

ಕಾಸರಗೋಡು: ನಗರ ಠಾಣೆಯಲ್ಲಿ ಕೋವಿಡ್ ಬಾಧಿಸಿದ್ದ ಪೊಲೀಸರು ರೋಗಮುಕ್ತರಾಗಿದ್ದಾರೆ. ಇಲ್ಲಿನ ೨೮ ಮಂದಿ ಪೊಲೀಸರಿಗೆ ಕೋವಿಡ್ ಬಾಧಿಸಿತ್ತು. ಇವರಿಂದ ಅವರನ್ನು ಚಿಕಿತ್ಸೆಗೊಳಪಡಿಸಿದ್ದು, ಬಳಿಕ ನಡೆದ ತಪಾಸಣೆಯಲ್ಲಿ ಫಲಿತಾಂಶ ನೆಗೆಟಿವ್ ಆಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇವರಲ್ಲಿ ಕೆಲವರು ಹಾಜರಾಗಿ ದ್ದಾರೆ. ಇದೇ ವೇಳೆ ಕೆಲವರ ಕ್ವಾರಂಟೈನ್ ಕಾಲಾವಧಿ ಮುಗಿದಿಲ್ಲ. ಅವರು ಮುಂದಿನ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದೇ ವೇಳೆ  ಪೊಲೀಸರು ಕೋವಿಡ್ ಮುಕ್ತರಾದ ಹಿನ್ನೆಲೆಯಲ್ಲಿ ನಗರಠಾಣೆಯಲ್ಲಿ ಏರ್ಪ ಡಿಸಲಾಗಿದ್ದ ಕಟ್ಟುನಿಟ್ಟಿನ ನಿಯಂತ್ರಣಗಳಲ್ಲಿ ಸಡಿಲಿಕೆ ಮಾಡಲಾಗಿದೆ.

NO COMMENTS

LEAVE A REPLY