ಮೊಗ್ರಾಲ್ ಹೊಳೆ ಬದಿ ಪತ್ತೆಯಾದ ಹೊಯ್ಗೆ ಮರಳಿ ನದಿಗೆ ಹಾಕಿದ ಪೊಲೀಸರು

0
47

 ಕುಂಬಳೆ: ಹೊಳೆ ಬದಿಯಲ್ಲಿ ಸಂಗ್ರಹಿಸಿಡಲಾದ ಅಪಾರ ಪ್ರಮಾಣದ ಹೊಯ್ಗೆಯನ್ನು ಕುಂಬಳೆ ಪೊಲೀಸರು ಮತ್ತೆ ಹೊಳೆಗೆ ಹಾಕಿದರು. ಮೊಗ್ರಾಲ್ ಹೊಳೆ ಬದಿಯಲ್ಲಿ ಸುಮಾರು ೮ ಲೋಡ್ ಹೊಯ್ಗೆಯನ್ನು ಸಂಗ್ರಹಿಸಿಡಲಾಗಿತ್ತು. ಇದನ್ನು ಪತ್ತೆಮಾಡಿದ ಪೊಲೀಸರು ಇದಕ್ಕೆ ಕಾವಲು ಏರ್ಪಡಿಸಿದ್ದರು. ಇಂದು ಬೆಳಿಗ್ಗೆ  ಠಾಣೆಯ ಎಸ್‌ಐ ಸೋಮಯ್ಯರ ನೇತೃತ್ವದಲ್ಲಿನ ಪೊಲೀಸರು ಜೆಸಿಬಿ ಉಪಯೋಗಿಸಿ ಹೊಯ್ಗೆಯನ್ನು ನದಿಗೆ ಹಾಕಿದರು. ಆದರೆ ಇಲ್ಲಿ ಹೊಯ್ಗೆ ಸಂಗ್ರಹಿಸಿಟ್ಟವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲವೆಂದು ಪೊಲೀಸರು ತಿಳಿಸಿದ್ದು, ಹೊಯ್ಗೆ ಮಾಫಿಯಾಗಳು ವ್ಯಾಪಕವಾಗಿ ಹೊಯ್ಗೆ ಸಾಗಾಟ ನಡೆಸುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಹೊಯ್ಗೆ ಸಾಗಾಟ ವಿರುದ್ಧ ತೀವ್ರ ತಪಾಸಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY