ವರದಕ್ಷಿಣೆಗಾಗಿ ಕಿರುಕುಳ:  ಯುವತಿಯ ಪತಿ ಸಹಿತ ಮೂವರ ವಿರುದ್ಧ ಕೇಸು

0
61

ಅಡೂರು: ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವುದಾಗಿ ಯುವತಿ ನೀಡಿದ ದೂರಿನಂತೆ ಆಕೆಯ ಪತಿ, ಪತಿಯ ತಾಯಿ, ಸಹೋದರಿಯರ ವಿರುದ್ಧ ಆದೂರು  ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಅಡೂರು ಉರುಡೂರಿನ ಗೀತ (೪೧) ಎಂಬವರು ನೀಡಿದ ದೂರಿನಂತೆ ಪತಿ ಬೋವಿಕ್ಕಾನ ಬೇಪುವಿನ ಅಶೋಕ, ಆತನ ತಾಯಿ ಸರೋಜಿನಿ, ಸಹೋದರಿ ಪುಷ್ಪಾ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ.

೨೦೧೦ರಲ್ಲಿ ವಿವಾಹ ನಡೆದಿದೆ. ಅನಂತರ ವರದಕ್ಷಿಣೆಗಾಗಿ ಒತ್ತಾಯಿಸಿ ನಿರಂತರ ಕಿರುಕುಳ ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.  ಕಿರುಕುಳ ಸಹಿಸಲಾಗದುದರಿಂದ ಉರುಡೂರಿನ ತಾಯಿ ಮನೆಯಲ್ಲಿ ವಾಸಿಸತೊಡಗಿದ್ದು, ಈಮಧ್ಯೆ ಅಶೋಕ ಬೇರೊಬ್ಬಳನ್ನು ಮದುವೆಯಾಗಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY