ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾದ ವ್ಯಕ್ತಿಗೆ ಉನ್ನತ ಹುದ್ದೆ

0
74

ತಿರುವನಂತಪುರ: ಚಿನ್ನ ಸಾಗಾಟ, ಲೈಫ್ ಮಿಷನ್ ಸಹಿತ ಹಲವು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ರಾಜ್ಯ ಸರಕಾರ ಇದೀಗ ಭ್ರಷ್ಚಾಚಾರ   ಪ್ರಕರಣದಲ್ಲಿ ಆರೋಪಿಯಾದ ಗೇರುಬೀಜ ಅಭಿವೃದ್ಧಿ ಕಾರ್ಪರೇಶನ್‌ನ ಮಾಜಿ ಎಂ.ಡಿಯನ್ನು ಇಮ್ಮಡಿಗಿಂತಲೂ ಹೆಚ್ಚು ವೇತನ ಲಭಿಸುವ ಉನ್ನತ ಹುದ್ದೆಗೆ ನೇಮಿಸಿದೆ.

ಗೇರುಬೀಜ ಅಭಿವೃದ್ಧಿ ಕಾರ್ಪ ರೇಶನ್‌ನಲ್ಲಿ ನಡೆದ ಗೇರುಬೀಜ ಭ್ರಷ್ಟಾ ಚಾರ ಪ್ರಕರಣದಲ್ಲಿ ಆರೋಪಿಯಾಗಿ ರುವ  ಕಾರ್ಪರೇಶನ್‌ನ ಮಾಜಿ ಮೆನೇಜಿಂಗ್ ಡೈರೆಕ್ಟರ್ ಕೆ.ಎ. ರತೀಶ್ ಎಂಬವರನ್ನು   ಉನ್ನತ ಹುದ್ದ್ದೆಗೆ ನೇಮಿಸ ಲಾಗಿದೆ.  ಭ್ರಷ್ಟಾಚಾರ ಪ್ರಕರಣದ ಪ್ರೋಸಿಕ್ಯೂಶನ್‌ನಿಂದ ಇವರನ್ನು ಹೊರತುಪಡಿಸಿದ್ದು, ಅದುವರೆಗೆ ೮೦ ಸಾವಿರ ರೂಪಾಯಿ ತಿಂಗಳ ವೇತನ ಲಭಿಸುತ್ತಿದ್ದ  ಇವರನ್ನು ಈಗ ೧,೭೦,೦೦೦ ರೂ.  ವೇತನವುಳ್ಳ  ಹುದ್ದೆಯಾದ  ಖಾದಿ ಬೋರ್ಡ್ ಸೆಕ್ರೆಟರಿಯಾಗಿ ನೇಮಿಸ ಲಾಗಿದೆ. ವೇತನ, ಮತ್ತಿತರ ಸೌಲಭ್ಯಗಳು ಸೇರಿ ೨ ಲಕ್ಷದಷ್ಟು ರೂಪಾಯಿ ಇವರಿಗೆ ಮಾಸಿಕ ವೇತನವಾಗಿ ಲಭಿಸಲಿದೆ.

ಗುಣಮಟ್ಟವಿಲ್ಲದ ಗೇರುಬೀಜ ಖರೀದಿಸಿದ ಹಿನ್ನೆಲೆಯಲ್ಲಿ  ಕಾರ್ಪರೇ ಶನ್‌ಗೆ ಭಾರೀ ನಷ್ಟವುಂಟುಮಾಡಿರು ವುದಾಗಿ ಸಿಬಿಐ ತನಿಖೆಯಲ್ಲಿ ಪತ್ತೆಹಚ್ಚಲಾಗಿತ್ತು. ಈ ಪ್ರಕರಣದಲ್ಲಿ  ರತೀಶ್ ಒಂದನೇ ಆರೋಪಿಯಾ ಗಿದ್ದರು. ಗೇರುಬೀಜ ಭ್ರಷ್ಟಾಚಾರ ನಡೆದ ಹಿನ್ನೆಲೆಯಲ್ಲಿ ಇವರ ವಿರುದ್ಧ     ಚಳವಳಿಗೆ ನೇತೃತ್ವ ನೀಡಿರುವುದು ಈಗಿನ ಸಚಿವಸಂಪುಟ ಸದಸ್ಯೆಯಾದ ಮೆರ್ಸಿಕುಟ್ಟಿ ಅಮ್ಮ ಆಗಿದ್ದರು.

NO COMMENTS

LEAVE A REPLY