ಕೊಳವೆ ಬಾವಿ ವಿವಾದ ಘರ್ಷಣೆಯಲ್ಲಿ ಇಬ್ಬರಿಗೆ ಗಾಯ

0
56

ಕುಂಬಳೆ: ಮಂಜೇಶ್ವರ ಪಂಚಾಯತ್‌ನ ಅಂಗಡಿಪದವು ಶಾಂತಿನಗರದಲ್ಲಿ ಪಂ.ನ ಕೊಳವೆಬಾವಿ ನಿರ್ಮಿಸುವ ವಿಷಯದಲ್ಲಿ ಉಂಟಾದ ಘರ್ಷಣೆಯಲ್ಲಿ ಇಬ್ಬರು ಗಾಯ ಗೊಂಡಿದ್ದಾರೆ. ಶಾಂತಿನಗರ ನಿವಾಸಿಗಳಾದ ರಹೀಂ ಎಂಬವರ ಪುತ್ರ ಮೊಹಮ್ಮದ್ ಸಮೀರ್ (೪೨), ಕುಟ್ಟಿ ಎಂಬವರ ಪುತ್ರ ಬಾಲಚಂದ್ರ (೩೮) ಎಂಬಿವರು ಗಾಯಗೊಂ ಡಿದ್ದು, ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಕೊಳವೆಬಾವಿ ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿ ೫ ಮಂದಿ ಹಲ್ಲೆಗೈದಿರುವುದಾಗಿ ಮೊಹಮ್ಮದ್ ಸಮೀರ್ ದೂರಿದ್ದಾರೆ. ಇದೇ ವೇಳೆ ಜಾತಿ ಹೆಸರಿನಲ್ಲಿ ನಿಂದಿಸಿ ತಂಡ ಹಲ್ಲೆಗೈದಿದೆ ಯೆಂದು ಬಾಲಚಂದ್ರ ಆರೋಪಿಸಿದ್ದಾರೆ.

NO COMMENTS

LEAVE A REPLY