ಕೆ.ಎನ್. ಕೃಷ್ಣ ಭಟ್ ಸಹಿತ ಪ್ರಮುಖ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

0
800

ಬದಿಯಡ್ಕ: ಪ್ರಮುಖ ಕಾಂಗ್ರೆಸ್ ನೇತಾರನೂ, ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿದ್ದ ಕೆ.ಎನ್. ಕೃಷ್ಣ ಭಟ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇಂದು ಮಧ್ಯಾಹ್ನ  ಕಿಳಿಂಗಾರು ಸಾಯಿಮಂದಿರದಲ್ಲಿ ನಡೆದ ಸಭೆಯಲ್ಲಿ ದಕ್ಷಿಣಕನ್ನಡ ಮಾಜಿ ಎಂ.ಎಲ್.ಸಿ ಹಾಗೂ ಬಿಜೆಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಮೋನಪ್ಪ ಭಂಡಾರಿ ಅವರು ಕೃಷ್ಣ ಭಟ್‌ರಿಗೆ ಹಾರಾರ್ಪಣೆಗೈದು ಬಿಜೆಪಿಗೆ ಸ್ವಾಗತಿಸಿದರು. ಕೃಷ್ಣ ಭಟ್ ರೊಂದಿಗೆ  ಅವರ ಪತ್ನಿ ಕಾಂಗ್ರೆಸ್ ಕಾರ್ಯಕರ್ತೆಯಾದ ಶೀಲಾ ಕೆ. ಭಟ್ ಸಹಿತ ೫೦ರಷ್ಟು ಪ್ರಮುಖ ಕಾಂಗ್ರೆಸ್ ಕಾರ್ಯಕರ್ತರೂ ಬಿಜೆಪಿಗೆ ಸೇರ್ಪ ಡೆಗೊಂಡಿದ್ದಾರೆ.

ಮುಸ್ಲಿಂ ಲೀಗ್‌ನೊಂದಿಗಿನ ಕಾಂ ಗ್ರೆಸ್ ಮೈತ್ರಿ ಬದಿಯಡ್ಕದ  ಕಾಂಗ್ರೆಸ್‌ನಲ್ಲಿ ಉಪ್ಪಿರಿಸಿದ ಮಡಕೆಯಂತಾಗಿದೆಯೆಂದು ಕೃಷ್ಣ ಭಟ್ ತಿಳಿಸಿದರು. ನಾಡಿನ ಅಭಿವೃದ್ಧಿ ಹಾಗೂ ಜನರ ಪುರೋಗತಿಗೆ ಪಂಚಾಯತ್ ನ ಯುಡಿಎಫ್ ಎಂದೂ ವಿವಾದವಾಗಿರುವುದೆಂದೂ  ಇದರಿಂದ ತಾನು ಕಾಂಗ್ರೆಸ್ ತ್ಯಜಿಸಿರುವುದಾಗಿ ಅವರು ತಿಳಿಸಿದರು.

ಜನರ ಪುರೋಗತಿ ಹಾಗೂ ನಾಡಿನ ಅಭಿವೃದ್ಧಿ ನರೇಂದ್ರಮೋದಿಯವರ ಕೈಯಲ್ಲಿ ಸುರಕ್ಷಿತವಾಗಿರುವುದೆಂಬ ಅರಿವಿನ ಹಿನ್ನೆಲೆಯಲ್ಲಿ ತಾನು ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ಅವರು ತಿಳಿಸಿದರು.  ದೇಶದ ವಿವಿಧ ಭಾಗಗಳಲ್ಲಿ ಕಂಡುಬರುತ್ತಿರುವ ರಾಜಕೀಯ ಬೆಳವಣಿಗೆಯಂಗವಾಗಿ ಕೃಷ್ಣ ಭಟ್‌ರ ಬಿಜೆಪಿ ಪ್ರವೇಶವೆಂದು  ಮೋನಪ್ಪ ಭಂಡಾರಿ ತಿಳಿಸಿದರು. ಚಿಂತಿಸುವ ಜನರು ಹಾಗೂ ದುಡಿಯುವವರು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿ ದ್ದಾರೆಂದು ಬಿಹಾರ ಚುನಾವಣೆಯ ಫಲಿತಾಂಶ ಸಾಬೀತುಪಡಿಸುತ್ತಿದೆಯೆಂದು ಅವರು ತಿಳಿಸಿದರು.

NO COMMENTS

LEAVE A REPLY