ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಧ್ಯೆ ಕುಸಿದು ಬಿದ್ದು ಎಲ್‌ಐಸಿ ಏಜೆಂಟ್ ನಿಧನ

0
72

ಮಂಜೇಶ್ವರ: ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಧ್ಯೆ ಕುಸಿದುಬಿದ್ದು ಎಲ್.ಐ.ಸಿ ಏಜೆಂಟ್ ಮೃತಪಟ್ಟರು. ಕೊಡ್ಲಮೊಗರು ಬಳಿಯ ಬೋರ್ಕಳ ನಿವಾಸಿ ವಾದಿರಾಜ.ಎ(೫೦) ಮೃತಪಟ್ಟವರು. ಇವರು ನಿನ್ನೆ ಬೆಳಿಗ್ಗೆ ಮನೆಯಿಂದ ಬೈಕ್‌ನಲ್ಲಿ ಹೊರಟಿದ್ದು, ಕಳಿಯೂರು ಗಾಂಧೀನಗರಕ್ಕೆ ತಲುಪುವಾಗ ಕುಸಿದುಬಿದ್ದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಹರ್ಷಾದ್ ವರ್ಕಾಡಿಯ ನೇತೃತ್ವದಲ್ಲಿ ಸ್ಥಳೀಯರು ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಇವರ ತಂದೆ ಕುಂಞಿ ಬಲ್ಯಾಯ ಹಾಗೂ ತಾಯಿ ವಿದ್ಯಾ ವತಿ ಈ ಹಿಂದೆ ನಿಧ ಹೊಂದಿ ದ್ದಾರೆ. ಮೃತರು ಅವಿವಾಹಿತರಾಗಿದ್ದು, ಸಹೋದರ ಹೇಮಂತ್‌ರಾಜ್, ಸಹೋದರಿಯರಾದ ಕನಕ, ಪ್ರತಿಭಾ, ಗೀತಾ, ಜಯಮಾಲ, ಇಂದುಪ್ರಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

NO COMMENTS

LEAVE A REPLY