ಚೆಂಗಳ ಪಂ.ನ ಹೋಟೆಲ್‌ಗಳಿಗೆ ಆರೋಗ್ಯಾಧಿಕಾರಿಗಳ ದಾಳಿ

0
70

ವಿದ್ಯಾನಗರ: ಚೆಂಗಳ ಪಂಚಾಯತ್‌ನ ನೆಲ್ಲಿಕಟ್ಟೆ, ಚೆರ್ಕಳ ಪೇಟೆ, ಆಲಂಪಾಡಿ ಎಂಬೆಡೆಗಳ ಹೋಟೆಲ್‌ಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿನ್ನೆ ದಾಳಿ ನಡೆಸಿ ಹಳಸಿದ ಆಹಾರವನ್ನು ವಶಪಡಿಸಿದ್ದಾರೆ. ಆಲಂಪಾಡಿಯ ಹೋಟೆಲ್‌ನಿಂದ ಹಳಸಿದ, ಉಪಯೋಗಶೂನ್ಯವಾದ ಆಹಾರವನ್ನು ವಶಪಡಿಸಿ ನಾಶಪಡಿಸ ಲಾಗಿದೆ. ನೆಲ್ಲಿಕಟ್ಟೆಯಿಂದಲೂ, ಚೆರ್ಕಳದ ಮೂರು ಹೋಟೆಲ್‌ಗಳಿಗೂ ಶುಚಿತ್ವ ಖಚಿತಪಡಿಸಲು ನೋಟೀಸು ನೀಡಲಾಗಿದೆ.

ನಿನ್ನೆ ಬೆಳಿಗ್ಗೆ ೮ ಗಂಟೆಯಿಂದ ಆರಂಭಿಸಿದ ತಪಾಸಣೆ ಸಂಜೆವರೆಗೆ ಮುಂದುವರಿಸಲಾಗಿತ್ತು. ಹೋಟೆಲ್‌ಗಳ ನೌಕರರು ೨೮ ದಿನಗಳಿಗೊಮ್ಮೆ ಕಡ್ಡಾಯವಾಗಿ ಆಂಟಿಜೆನ್ ತಪಾಸಣೆ ನಡೆಸಬೇಕೆಂದೂ, ಅದರ ಫಲಿ ತಾಂಶವನ್ನು ಹೋಟೆಲ್‌ಗಳಲ್ಲಿ ತೆಗೆದಿರಿಸಬೇಕೆಂದೂ, ಚೆಂಗಳ ಹೆಲ್ತ್ ಇನ್ಸ್‌ಪೆಕ್ಟರ್ ಕೆ.ಎಸ್. ರಾಜೇಶ್ ಸೂಚಿಸಿದ್ದಾರೆ. ಜ್ಯೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಹಾಸಿಫ್, ಕೃಷ್ಣಪ್ರಸಾದ್, ಜ್ಯೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಆಶಾ ಮೋಳ್ ಭಾಗವಹಿಸಿದರು.

NO COMMENTS

LEAVE A REPLY