ಕೋವಿಡ್ ತೀವ್ರಗೊಂಡ ರಾಜ್ಯಗಳಲ್ಲಿ ಕೇಂದ್ರದ ಪ್ರತ್ಯೇಕ ತಂಡದ ಅವಲೋಕನ

0
35

ಹೊಸದಿಲ್ಲಿ: ಕೋವಿಡ್ ರೋಗ ಹರಡುವಿಕೆ ತೀವ್ರಗೊಂಡ ಇನ್ನಷ್ಟು ರಾಜ್ಯಗಳಿಗೆ ಕೇಂದ್ರ ತಜ್ಞರ ತಂಡವನ್ನು ಕಳುಹಿಸಲು ನಿರ್ಧರಿಸಿದೆ. ನಿನ್ನೆ ಹರಿಯಾಣ, ರಾಜಸ್ಥಾನ, ಗುಜರಾತ್, ಮಣಿಪುರ ಎಂಬೀ ರಾಜ್ಯಗಳಿಗೆ ಕೇಂದ್ರ ಪ್ರತ್ಯೇಕ ತಂಡವನ್ನು ಕಳುಹಿಸಿದೆ. ಕೇರಳ ಸಹಿತ ಇನ್ನೂ ಕೆಲವು ರಾಜ್ಯಗಳಿಗೆ ತಜ್ಞರ ತಂಡ ಭೇಟಿ ನೀಡಿ ಇದುವರೆಗೆ ನಡೆದ ಕೋವಿಡ್ ಪ್ರತಿರೋಧ ಚಟುವಟಿಕೆ ಬಗ್ಗೆ ಅವಲೋಕನ ನಡೆಸಲಿದೆ.

ಇದೇ ವೇಳೆ ದೇಶದಲ್ಲಿ ಕೋವಿಡ್ ರೋಗ ಮುಕ್ತರಾದವರ ಸಂಖ್ಯೆ ೯೩.೬೭ ಶೇಕಡಾಕ್ಕೇರಿದೆ. ನಿನ್ನೆವರೆಗಿನ ಲೆಕ್ಕಾಚಾರ ಪ್ರಕಾರ ಒಟ್ಟು ೮೪,೭೮,೧೨೪ ಮಂದಿ ರೋಗಮುಕ್ತರಾಗಿದ್ದಾರೆ. ಆರೋಗ್ಯ ಸಚಿವಾಲಯದ ಲೆಕ್ಕಾಚಾರ ಪ್ರಕಾರ ನಿನ್ನೆ ೪೬,೨೩೨ ಮಂದಿಗೆ ದೇಶದಲ್ಲಿ ಕೋವಿಡ್ ದೃಢೀಕರಿಸಲಾಗಿದೆ. ಇದರೊಂದಿಗೆ ರೋಗ ಬಾಧಿತರ ಒಟ್ಟು ಸಂಖ್ಯೆ ೯೦೫೦೫೯೭ಕ್ಕೇರಿದೆ. ನಿನ್ನೆ ೪೯೭೧೫ ಮಂದಿ ರೋಗಮುಕ್ತರಾಗಿದ್ದಾರೆ. ಇದೇ ವೇಳೆ ನಿನ್ನೆ ೫೬೪ ಮಂದಿಯ ಸಾವು ಖಚಿತಪಡಿಸಲಾಗಿದೆ. ಇದರಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ ೧,೩೨,೭೨೬ಕ್ಕೇರಿದೆ.

NO COMMENTS

LEAVE A REPLY