ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆ ನೇಣುಬಿಗಿದು ಸಾವು: ಸಾವಿನಲ್ಲಿ ಸಂಶಯ; ಮೃತದೇಹ ಪರಿಯಾರಂಗೆ

0
64

ಕಾಸರಗೋಡು: ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿನಲ್ಲಿ ನಿಗೂಢತೆ ಯುಂಟಾದ ಹಿನ್ನೆಲೆಯಲ್ಲಿ  ಸಮಗ್ರ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ  ಕೊಂಡೊಯ್ಯಲಾಗಿದೆ. ಬೇಡಗಂ ಪಳ್ಳತ್ತುಂಗಾಲ್ ಪಯ್ಯಂಗಾನಂ ಕಾಲನಿಯ ಚೀರಿಪ್ಪಾಡಿ ಎಂಬವರ ಪತ್ನಿ ಕೈಮಚ್ಚಿ (೬೦) ಮೃತಪಟ್ಟ ಮಹಿಳೆ.

ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಮನೆಯೊಳಗೆ ಇವರು ನೇಣುಬಿಗಿದು  ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಇದರಿಂದ ಮೃತದೇಹವನ್ನು ಕಾಸರಗೋಡು  ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದಿಂದ ರಕ್ತ ಸ್ರಾವವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಾವಿ ನಲ್ಲಿ ಸಂಶಯ ಸೃಷ್ಟಿಯಾಗಿತ್ತು.  ಈ ಹಿನ್ನೆ ಲೆಯಲ್ಲಿ ಸಮಗ್ರ ಮರಣೋತ್ತರ ಪರೀಕ್ಷೆ ಗಾಗಿ ಮೃತದೇಹವನ್ನು ಪರಿಯಾರಂ ಗೆ ಕೊಂಡೊಯ್ಯುವಂತೆ ನಿರ್ದೇಶಿಸಲಾಗಿದೆ.

NO COMMENTS

LEAVE A REPLY