ಬೆಂಕಿ ತಗಲಿ ಯುವತಿ ಮೃತ್ಯು: ಕೇಸು ದಾಖಲು

0
49

ಉದುಮ: ಗೃಹಿಣಿ ಬೆಂಕಿ ತಗಲಿ ಮೃತಪಟ್ಟ ಘಟನೆಯಲ್ಲಿ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದರು. ಉದುಮ ಕೊಕ್ಕಾಲ್‌ನ ಕನೀಶ್‌ರ ಪತ್ನಿ ಕೆ.ಎಂ. ರಜಿಶ (೨೭) ನಿನ್ನೆ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ತಿಂಗಳ ೧೫ರಂದು ಪೆರಿಯ, ಕುಟ್ಯಾನದ ಮನೆಯಲ್ಲಿ ರಜೀಶರಿಗೆ ಬೆಂಕಿ ತಗಲಿತ್ತು. ಗಂಭೀರವಾಗಿ ಗಾಯಗೊಂಡ ಇವರನ್ನು ಮಂಗಳೂರಿನ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವತಿಯ ಹೇಳಿಕೆ ದಾಖಲಿಸಲು ಪೊಲೀಸರು ಆಸ್ಪತ್ರೆಗೆ ತಲುಪಿದ್ದರೂ, ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಹೇಳಿಕೆ ದಾಖಲಿಸಲು ಸಾಧ್ಯವಾಗಿರಲಿಲ್ಲ.

ಪತಿ ಕನಿಶ್ ಕೊಲ್ಲಿಯಲ್ಲಿದ್ದಾರೆ. ಪತ್ನಿಗೆ ಬೆಂಕಿ ತಗಲಿದ ಮಾಹಿತಿ ತಿಳಿದು ಊರಿಗೆ ತಲುಪಿದ್ದಾರೆ. ಆದರೆ ಯುವತಿಯ ಸಾವಿಗೆ ಕಾರಣವೇನೆಂದೂ ಸ್ಪಷ್ಟವಾಗಿಲ್ಲವೆಂದೂ ತನಿಖೆ ನಡೆಸಲಾ ಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY