ನಾಯ್ಕಾಪು ಹರೀಶ ಕೊಲೆ: ಆರೋಪಿಗಳಿಗೆ ಸಹಾಯ ಮಾಡಿದಾತ ಸೆರೆ

0
62

ಕುಂಬಳೆ: ಕೆಲಸದ ಸ್ಥಳದಿಂದ ಮನೆಗೆ ಮರಳುತ್ತಿದ್ದ ನಾಯ್ಕಾಪು ನಿವಾಸಿ ಹರೀಶ (೩೪)ನನ್ನು ಕೊಲೆಗೈದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು  ಕುಂಬಳೆ ಸಿ.ಐ ಬಂಧಿಸಿದ್ದಾರೆ. ಉಪ್ಪಳದ ಮಜಲ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮುಹಮ್ಮದ್ ಹನೀಫ್ (೨೩)ನನ್ನು ಮೊನ್ನೆ ರಾತ್ರಿ ಉಪ್ಪಳದಿಂದ ಸೆರೆ ಹಿಡಿಯಲಾಗಿದೆ.

ಆಗಸ್ಟ್ ೧೭ರಂದು ರಾತ್ರಿ ಸೂರಂಬೈಲ್‌ನ ಎಣ್ಣೆ ಗಿರಣಿಯಿಂದ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಹರೀಶ್‌ರನ್ನು ದಾರಿಯಲ್ಲಿ ತಡೆದು ಇರಿದು ಕೊಲೆಗೈಯ್ಯಲಾಗಿತ್ತು. ಇದರಲ್ಲಿನ ಆರೋಪಿಗಳೆಂದು ಶಂಕಿಸ ಲಾಗಿದ್ದ ಬದಿಯಡ್ಕ ಕುಂಟಂಗೇರಡ್ಕ ಎಸ್.ಟಿ. ಕಾಲನಿಯ ಮಣಿಕಂಠನ್ (೧೯), ರೋಶನ್ (೨೧) ಎಂಬಿವರು ಶೇಡಿಗುಮ್ಮೆ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಉಳಿದ

ಇಬ್ಬರು ಆರೋಪಿಗಳಾದ ಸಚಿನ್, ಶ್ರೀಕುಮಾರ್‌ನನ್ನು ಬಂಧಿಸಲಾಗಿತ್ತು. ಇವರಲ್ಲದೆ ಇವರಿಗೆ ಸಹಾಯ ಮಾಡಿದ ಇನ್ನೋರ್ವ ಆರೋಪಿಯಿದ್ದಾನೆಂದು ಬಳಿಕ ತನಿಖೆಯಿಂದ ತಿಳಿದುಬಂದಿತ್ತು. ಇದರಿಂದ ನಿನ್ನೆ ಮುಹಮ್ಮದ್ ಹನೀಫ್‌ನನ್ನು ಸೆರೆಹಿಡಿಯಲಾಗಿದೆ. ಆರೋಪಿಗಳಿಗೆ ಆಯುಧ ಒದಗಿಸಿದ ಕೊಲೆಗೈದ ಬಳಿಕ ತಲೆ ಮರೆಸಿಕೊಳ್ಳಲು ಸಹಾಯ ಮಾಡಿದನೆಂಬ ಆರೋಪ ದಂತೆ ಈತನನ್ನು ಸೆರೆ ಹಿಡಿಯಲಾಗಿದೆ. ಸಿ.ಐ. ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ.

NO COMMENTS

LEAVE A REPLY