ಕಾರು-ಟೆಂಪೋ ಢಿಕ್ಕಿ: ಅದೃಷ್ಟದಿಂದ ಪಾರಾದ ಪ್ರಯಾಣಿಕರು

0
154

ಉಪ್ಪಳ: ಕಾರು ಹಾಗೂ ಟೆಂಪೋ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾದರು. ಇಂದು ಮುಂಜಾನೆ ಉಪ್ಪಳ ಬಳಿಯ ಹನಫಿ ಬಜಾರ್‌ನಲ್ಲಿ ಅಪಘಾತ ಸಂಭವಿಸಿದೆ. ಕಾಸರಗೋಡು ಭಾಗದಿಂದ ಮಂಗಳೂರಿನತ್ತ ವೈದ್ಯರ ತಂಡ ಪ್ರಯಾಣಿಸುತ್ತಿದ್ದ ಕಾರು ಹಾಗೂ ಹಾಲು ವಿತರಿಸುವ ಟೆಂಪೋ ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ. ಇದರಿಂದ ಕಾರು ನಜ್ಜುಗುಜ್ಜಾಗಿದೆ. ಟೆಂಪೋ ಮಗುಚಿ ಬಿದ್ದಿದೆ. ಈ ವಾಹನದಲ್ಲಿ ಸಿಲುಕಿಕೊಂಡವರನ್ನು  ಇತರ ಪ್ರಯಾಣಿಕರು ಹಾಗೂ ಸ್ಥಳೀಯರು ಸೇರಿ ಪಾರು ಮಾಡಿದರು. ಕಾರಿನಲ್ಲಿದ್ದ ಮಹಿಳೆಯೋರ್ವರು ದೇರಳಕಟ್ಟೆ ಆಸ್ಪತ್ರೆಯ ಡಾಕ್ಟರೆನ್ನಲಾಗಿದೆ. ಅಪಘಾತದಿಂದ ಅಲ್ಪಹೊತ್ತು ಹೆದ್ದಾರಿಯಲ್ಲಿ ಸಂಚಾರ ತಡೆ ಉಂಟಾಗಿದೆ. ಸ್ಥಳಕ್ಕೆ ಹೆದ್ದಾರಿ ಪೊಲೀಸರು ತಲುಪಿ ಸಂಚಾರ ಸುಗಮಗೊಳಿಸಿದರು.

NO COMMENTS

LEAVE A REPLY