ಮಂಜೇಶ್ವರ ಕ್ಷೇತ್ರದಲ್ಲಿ ವ್ಯಾಪಕ ನಕಲಿ ಮತದಾನ: ಬಿಜೆಪಿ ನ್ಯಾಯಾಲಯಕ್ಕೆ

0
114

ಕಾಸರಗೋಡು: ಮಂಜೇಶ್ವರ ವಿಧಾನ ಸಭಾ ಚುನಾವಣೆ ಯಲ್ಲಿ ಫಲಿತಾಂಶದ ಬಗ್ಗೆ ಬಿಜೆಪಿ  ನ್ಯಾಯಾಲಯವನ್ನು ಸಮೀಪಿ ಸಲಿದೆ. ಮಂಡಲದಲ್ಲಿ ಮುಸ್ಲಿಂಲೀಗ್ ಅಭ್ಯರ್ಥಿಯಾಗಿದ್ದ ಪಿ. ಬಿ. ಅಬ್ದುಲ್ ರಜಾರ್ ೮೯ ಮತಗಳ ಅಂತರದಲ್ಲಿ  ಜಯಗಳಿಸಿರುವುದಾಗಿ ಪ್ರಕಟಿಸಲಾಗಿದೆ. ಆದರೆ ಮಂಡಲದಲ್ಲಿ ನೂರಾರು ನಕಲಿ ಮತಗಳು ಹಾಕಲಾಗಿದೆ ಎಂದು ಬಿಜೆಪಿ ನೇತಾರರು ಪತ್ತೆ ಹಚ್ಚಿದ್ದಾರೆ. ಊರಿನಲ್ಲಿ ಇಲ್ಲದವರು, ಮೃತಪಟ್ಟ ವರ, ಅಶಕ್ತರಾಗಿ ಹಾಸಿಗೆ ಹಿಡಿದವರು ಸೇರಿದಂತೆ ಇವರ ಹೆಸರಲ್ಲೂ ಕಳ್ಳಮತ ಹಾಕಲಾಗಿದೆ ಎಂದು ಬಿಜೆಪಿ ನೇತಾರರಾದ ಸುರೇಶ್ ಕುಮಾರ್ ಶೆಟ್ಟಿ, ಕೆ. ಶ್ರೀಕಾಂತ್ ತಿಳಿಸಿದ್ದಾರೆ. ಇವರ ಬಗ್ಗೆ ಸಂಪೂರ್ಣ ಮಾಹಿತಿ ಪಕ್ಷ ಸಂಗ್ರಹಿಸುತ್ತಿದೆ ಎಂದು ಹೇಳಿದ ಅವರು ಕೆಲವೇ ದಿನಗಳಲ್ಲಿ ಚುನಾವಣಾ ಅರ್ಜಿಯನ್ನು ನ್ಯಾಯಾಲಯಕ್ಕೆ ನೀಡುವುದಾಗಿ ಅವರು ತಿಳಿಸಿದರು. ನಿನ್ನೆ ಕಾಸರಗೋಡು ಜಿಲ್ಲೆಗೆ ತಲುಪಿದ ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಮಂಜೇಶ್ವರ ಮಂಡಲದಲ್ಲಿ ವ್ಯಾಪಕವಾಗಿ ನಡೆದನಕಲಿ ಮತದ ಬಗ್ಗೆ ನ್ಯಾಯಾಲಯವನ್ನು ಸಮೀಪಿಸುವುದಾಗಿ ಪಕ್ಷವು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ. ಮಂಜೇಶ್ವರ ಮಾತ್ರವಲ್ಲ ರಾಜ್ಯದ ಇತರ ಕ್ಷೇತ್ರಗಳಲ್ಲೂ ಈ ರೀತಿ ನಕಲಿ ಮತದಾನ ನಡೆಸಲಾಗಿದ್ದು ಅದರ ವಿರುದ್ಧವೂ ನ್ಯಾಯಾಲಯವನ್ನು ಸಮೀಪಿಸುವುದಾಗಿ ಕುಮ್ಮನಂ ತಿಳಿಸಿದ್ದಾರೆ.

NO COMMENTS

LEAVE A REPLY