ಶುಕ್ರಿಯ ಬಸ್ ಮಾಲಕ ನಿಧನ

0
185

ಕಾಸರಗೋಡು: ಪ್ರಮುಖ ವ್ಯಾಪಾರಿಯೂ, ಶುಕ್ರಿಯ ಗ್ರೂಪ್ ಆಫ್ ಕಂಪೆನಿಯ ಸ್ಥಾಪಕನೂ, ಬಸ್ ಮಾಲಕನೂ ಆಗಿರುವ ಅಣಂಗೂರು ಬೆದಿರ ಚೂಡುವಳಪ್ಪಿಲ್ ಹೌಸ್‌ನ ಸಿ.ಎ. ಅಬೂಬಕ್ಕರ್ ಹಾಜಿ(೭೫) ಇಂದ ಬೆಳಿಗ್ಗೆ ನಿಧನ ಹೊಂದಿದರು.

ಬೆದಿರ ಜುಮಾ ಮಸೀದಿಯ ಕೋಶಾಧಿಕಾರಿಯೂ ಆಗಿದ್ದರು. ದುಬಾ, ಅಜ್ಮಾನ್, ಕಾಸರಗೋಡು ಎಂಬೆಡೆಗಳಲ್ಲಿ ಟ್ರಾವೆಲ್ಸ್ ಹಾಗೂ  ಶುಕ್ರಿಯ ಗ್ರೂಪ್ ಆಫ್ ಎಂಟರ್ ಪ್ರೈಸಸ್, ಶುಕ್ರಿಯ ಟ್ರೇಡಿಂಗ್ ಕಂಪೆನಿಯನ್ನು ನಡೆಸುತ್ತಿದ್ದರು. ಮೃತರು ಪತ್ನಿ ಆಸ್ಮ,  ಮಕ್ಕಳಾದ ಮುಹಮ್ಮದ್ ಕುಂಞಿ, ಫಾತಿಮತ್ ನಸಿಯ, ಆಯಿಶ, ಶಿಹಾಬ್, ಮೈಮೂನತ್ತ್ ರಾಶಿದ, ಅಳಿಯ ಸೊಸೆಯಂದಿರಾದ ಅಬ್ದುಲ್ ರಹಿಮಾನ್, ಅಬ್ದುಲ್ ಖಾದರ್, ಸಹೋದರ ಇಬ್ರಾಹಿಂ ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY