ಕುಂಬಳೆ ಠಾಣೆ ಮುಂದೆ ವಾಹನಗಳ ರಾಶಿ ಕಾರಿನೊಳಗೆ ಚಿಗುರೊಡೆದು ಬೆಳೆಯುತ್ತಿರುವ ಮರ

0
145

ಕುಂಬಳೆ: ವಿವಿಧ ಪ್ರಕರಣಗಳಿಗೆ ಸಂಬಂಧ ಪಟ್ಟು ಕುಂಬಳೆ ಪೊಲೀಸರು ವಶಪಡಿಸಿಕೊಂಡ ವಾಹನಗಳು ಇದೀಗ ಠಾಣೆ ಪರಿಸರದಲ್ಲಿ ರಾಶಿ ಬಿದ್ದಿವೆ. ಇದು ಇತರ ವಾಹನಗಳ ನಿಲುಗಡೆಗೆ ಸಮಸ್ಯೆಯಾಗಿದ್ದು, ಅಲ್ಲದೆ ಮುಂದೆ ವಶಪಡಿಸಿಕೊಳ್ಳುವ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕೆಂದು ತಿಳಿಯದೆ ಪೊಲೀಸರು ಸಮಸ್ಯೆಯಲ್ಲಿದ್ದಾರೆ. ಅನಧಿಕೃತವಾಗಿ ಹೊಯ್ಗೆ ಸಾಗಾಟ ನಡೆಸಿದ ಸಂಬಂಧ ೮೮ ವಾಹನಗಳು, ಗಾಂಜಾ ಸಾಗಾಟ ಸಂಬಂಧ ೫, ಅಬಕಾರಿ ಪ್ರಕರಣಗಳಿಗೆ ಸಂಬಂಧಿಸಿ ೨, ಕಳವು ಸಂಬಂಧ ೮ ಸಹಿತ ಒಟ್ಟು ೧೧೪ ವಾಹನಗಳು ಇದೀಗ ಠಾಣೆ ಮುಂದೆ ನಿಲ್ಲಿಸಲಾಗಿದೆ. ಈ ರೀತಿ ವಶಪಡಿಸಿಕೊಂಡ ವಾಹನಗಳನ್ನು ಹರಾಜು ನಡೆಸಿ ಮಾರಾಟ ಗೈಯ್ಯಲು ಸಂಬಂಧ ಪಟ್ಟ ಇಲಾಖೆ ಕೈಗೊಳ್ಳುತ್ತಿಲ್ಲವೆನ್ನಲಾಗಿದೆ. ಇದರಿಂದ ವಾಹನಗಳು ತುಕ್ಕುಹಿಡಿದು ಉಪಯೋಗಶೂನ್ಯವಾಗುತ್ತಿದೆ.

ಇದೇ ವೇಳೆ ವಾಹನಗಳ ಮಧ್ಯೆಯಿರುವ ಕಾರೊಂದರ ಮೇಲೆ ಮರವೊಂದು ಬೆಳೆದು ಮೇಲೇರುತ್ತಿದೆ. ಕಾರಿನ ಬೋನೆಟ್ ಹಾಗೂ ಸೀಟಿನ ಮಧ್ಯೆ ಮೊಳಕೆಯೊಡೆದು ಬೆಳೆದ ಗಿಡ ಮರವಾಗುತ್ತಿದ್ದು, ಸರ್ವರ ಗಮನ ಸೆಳೆಯುತ್ತಿದೆ.

NO COMMENTS

LEAVE A REPLY