ಐ.ಎಸ್.ಗೆ ಸೇರ್ಪಡೆಗೊಂಡವರೊಂದಿಗೆ ನಂಟು: ಯು.ಎ.ಇ ಗಡಿಪಾರು ಮಾಡಿದ ಏಳು ಮಂದಿ ಕಾಸರಗೋಡು ನಿವಾಸಿಗಳ ತನಿಖೆ

0
95

ಕಾಸರಗೋಡು: ಭಯೋತ್ಪಾದಕ ಸಂಘಟನೆಯಾದ ಐ.ಎಸ್.ಗೆ ಸೇರಿದವರೊಂದಿಗೆ ನಂಟು ಹೊಂದಿ ದರೆಂಬ ಆರೋಪದಂತೆ ಯು.ಎ.ಇ ಯಿಂದ ಗಡಿಪಾರು ಮಾಡಿದ ಏಳು ಮಂದಿ ಕೇರಳೀಯರನ್ನು ಎನ್.ಐ.ಎ. ತನಿಖೆಗೊಳಪಡಿಸಿದೆ ಎಂಬ ಬಗ್ಗೆ ತಿಳಿದು ಬಂದಿದೆ. ಕಾಸರಗೋಡು ಜಿಲ್ಲೆಯ ತೃಕರಿಪುರ, ಪಡನ್ನ ನಿವಾಸಿಗಳಾದ ಏಳು ಮಂದಿಯನ್ನು ಎನ್.ಐ.ಎ. ಕೊಚ್ಚಿಗೆ ಕರೆಸಿ ತನಿಖೆಗೊಳಪಡಿಸಿದೆ. ಇವರ ಪಾಸ್‌ಪೋರ್ಟ್ ಸಹಿತ ದಾಖಲೆ ಪತ್ರಗಳನ್ನು ವಶಪಡಿಸಲಾಗಿದೆ.

ಐ.ಎಸ್.ಗೆ ಸೇರ್ಪಡೆಗೊಂಡ ಕಾಸರಗೋಡು ನಿವಾಸಿಗಳೊಂದಿಗೆ ನಂಟು ಹೊಂದಿದ್ದಾರೆಂಬ ಆರೋಪ ಗಳ ಹಿನ್ನೆಲೆಯಲ್ಲಿ ಯು.ಎ.ಇಯಲ್ಲಿ ಸೆರೆಗೀಡಾದ ಏಳು ಮಂದಿಯನ್ನು ಎನ್.ಐ.ಎ. ತಂಡ ತನಿಖೆಗಾಗಿ ಕರೆಸಿದೆ. ಯು.ಎ.ಇ.ಯಲ್ಲಿ ಜೈಲು ಶಿಕ್ಷೆ ಅನುಭವಿಸಿದ ಇವರನ್ನು ಕಳೆದ ಅಕ್ಟೋಬರ್‌ನಲ್ಲಿ ಗಡಿಪಾರು ಮಾಡಲಾಗಿತ್ತು. ಅನಂತರ ಪೊಲೀಸ್ ಹಾಗೂ ಇಂಟೆಲಿಜೆನ್ಸ್ ಇವರ ಕುರಿತು ಮಾಹಿತಿ ಸಂಗ್ರಹಿಸಿತ್ತು. ಇದರ ಬೆನ್ನಲ್ಲೇ ಎನ್.ಐ.ಎ. ಇವರನ್ನು ತನಿಖೆಗೊಪಡಿಸಿರುತ್ತದೆ.

NO COMMENTS

LEAVE A REPLY