೫೦ ಲಕ್ಷ ರೂ.ಗಳ ಚಿನ್ನ ಸಹಿತ ಕಾಸರಗೋಡು ನಿವಾಸಿ ಕಣ್ಣೂರಿನಲ್ಲಿ ಸೆರೆ

0
37

ಕಣ್ಣೂರು: ೫೦ ಲಕ್ಷ ರೂಪಾಯಿ ಮೌಲ್ಯದ ಚಿನ್ನ ಸಹಿತ ಕಾಸರಗೋಡು ನಿವಾಸಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದಾನೆ. ನೆಲ್ಲಿಕುಂಜೆ ಮಸೀದಿ ರಸ್ತೆಯ ಸಿದ್ದಿಕ್ ನೆಲ್ಲಿಕುನ್ನು ಮೆಹಮೂದ್ ಎಂಬಾತ ಬಂಧಿತ ವ್ಯಕ್ತಿಯೆಂದು ಹೇಳಲಾಗುತ್ತಿದೆ. ದುಬಾಯಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಪ್ರಯಾಣಿಕನಾದ ಈತನಿಂದ ಪೇಸ್ಟ್ ರೂಪದಲ್ಲಿದ್ದ ೯೭೩ ಗ್ರಾಂ ಚಿನ್ನ ಅಧಿಕಾರಿಗಳು ವಶಪಡಿಸಿದ್ದಾರೆ. ಇದಕ್ಕೆ ೪೯,೧೩,೫೧೦ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY