ಕುಂಬಳೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯಗೈದ ಬಗ್ಗೆ ತಂದೆ ನೀಡಿದ ದೂರಿನಂತೆ ಓರ್ವನ ವಿರುದ್ಧ ಕುಂಬಳೆ ಠಾಣೆಯಲ್ಲಿ ಪೋಕ್ಸೋ ಕೇಸು ದಾಖಲಿ ಸಲಾ ಗಿದೆ. ಕುಂಬಳೆ ಠಾಣೆ ವ್ಯಾಪ್ತಿಯ ೧೬ರ ಬಾಲಕಿಗೆ ನಾಯ್ಕಾ ಪು ನಿವಾಸಿ ಪ್ರದೋಷ್ ಎಂಬಾತ ಲೈಂಗಿಕ ದೌರ್ಜ ನ್ಯಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿ ದೆ. ಕಳೆದ ಮಾರ್ಚ್ ೧೯ರಿಂದ ಬೈಕ್ನಲ್ಲಿ ವಿವಿಧ ಕಡೆಗೆ ಕರೆದುಕೊಂಡು ಹೋಗಿ ದೌರ್ಜನ್ಯ ನಡೆಸಿರುವು ದೆಂದು ದೂರಿ ನಲ್ಲಿ ಹೇಳಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಯತ್ನ ಆರಂಭಿಸಿದ್ದಾರೆ.