ಹಿಂದಕ್ಕೆ ಚಲಿಸಿದ ಲಾರಿ ಢಿಕ್ಕಿ ಹೊಡೆದು ಕಾರು ಪ್ರಯಾಣಿಕ ಮೃತ್ಯು: ಓರ್ವನಿಗೆ ಗಂಭೀರ

0
130

ಕಾಸರಗೋಡು:  ಮರ ಹೇರಿದ ಲಾರಿ ದಿಢೀರ್ ಹಿಂದಕ್ಕೆ ಚಲಿಸಿದ ಪರಿಣಾಮ ಕಾರು ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಸಂಭವಿಸಿದೆ.

ಇಂದು ಮುಂಜಾನೆ ೫ ಗಂಟೆ ವೇಳೆ ಪಡನ್ನಕ್ಕಾಡ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿ ಸಿದೆ. ಅಪಘಾತದಲ್ಲಿ ಬಂದಡ್ಕ ಬಳಿ ಯ  ಬೇತೂರುಪಾರ ಎಂಬಲ್ಲಿನ ದಿ| ಕುಂಞಂಬು ನಾಯರ್‌ರ ಪುತ್ರ ಗೋಪಾಲ ಕೃಷ್ಣನ್ (೫೭) ಎಂಬವರು ಮೃತಪಟ್ಟಿದ್ದಾರೆ.

ಇವರ ಜತೆಗೆ ಕಾರಿನಲ್ಲಿದ್ದ ಬೇ ತೂರುಪಾರದ ಗಿರೀಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗೋಪಾಲಕೃಷ್ಣನ್ ಪತ್ನಿ ಓಮನ, ಮಕ್ಕಳಾದ ಜಿತಿನ್, ಜಿಷ್ಣು ಹಾಗೂ ಬೇತೂರುಪಾರದ ಗಿರೀಶ್ ಎಂಬವರು  ಇಂದು ಮುಂ ಜಾನೆ ಪರಶ್ಶಿನಿಕಡವು ಕ್ಷೇತ್ರಕ್ಕೆಂದು ತೆರಳಿದ್ದಾರೆ. ಪ್ರಯಾಣ ಮಧ್ಯೆ ಇವರು ಸಂಚರಿಸಿದ ಕಾರು ಪಡನ್ನಕ್ಕಾಡ್‌ಗೆ ತಲುಪಿದಾಗ  ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಿಲ್ಲಿಸಿದ್ದ ಮರ ಹೇರಿದ ಲಾರಿ   ದಿಢೀರ್ ಹಿಂದಕ್ಕೆ ಚಲಿಸಿದೆ. ಈ ವೇಳೆ ಲಾರಿಯಲ್ಲಿದ್ದ ಮರ ಕಾರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭ ವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಗೋಪಾಲಕೃಷ್ಣನ್ ತಕ್ಷಣ ಮೃತಪಟ್ಟಿದ್ದಾರೆ.  ಅಪ ಘಾತದಲ್ಲಿ ಇವರ ಮಕ್ಕಳಾದ ಜಿತಿನ್ ಹಾಗೂ ಜಿಷ್ಣು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

NO COMMENTS

LEAVE A REPLY