ಹೊಡೆದಾಟ: ಇಬ್ಬರ ವಿರುದ್ಧ ಕೇಸು

0
35

ಮಂಜೇಶ್ವರ: ಪರಸ್ಪರ ಹೊಡೆದಾಡುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದು ಕೇಸು ದಾಖಲಿಸಿದ್ದಾರೆ. ಹೊಸಬೆಟ್ಟು ಮುಬಾರಕ್ ಮಂಜಿಲ್‌ನ ಶಾಹುಲ್ ಹಮೀದ್ (೫೬), ಕುಂಜತ್ತೂರು ಯತೀಂಕಾನ ರಸ್ತೆಯ ಅಶ್ರಫ್ ಮಂಜಿಲ್‌ನ ಮೊಹಮ್ಮದ್ ಅಶ್ರಫ್ (೪೧) ಎಂಬವರನ್ನು ಸೆರೆ ಹಿಡಿದು, ಎಸ್.ಐ. ರಾಘವನ್ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ನಿನ್ನೆ ಸಂಜೆ ೬.೨೦ರ ವೇಳೆ ಹೊಸಂಗಡಿಯಲ್ಲಿ ಇಬ್ಬರು ಪರಸ್ಪರ ಹೊಡೆದಾಟ ನಡೆಸುತ್ತಿದ್ದರು. ಕೇಸು ದಾಖಲಿಸಿ ಜಾಮೀನು ನೀಡಲಾಗಿದೆ. ಹಣದ ವಿಷಯವೇ ಹೊಡೆದಾಟಕ್ಕೆ ಕಾರಣವೆನ್ನಲಾಗಿದೆ.

NO COMMENTS

LEAVE A REPLY