ಕೋವಿಡ್: ಕೊಚ್ಚಿಗೆ ತಲುಪಿದ ಚುಚ್ಚುಮದ್ದು

0
30

ತಿರುವನಂತಪುರ: ರಾಜ್ಯಕ್ಕಿರುವ ಮೊದಲ ಹಂತದ ಕೋವಿಡ್ ಚುಚ್ಚು ಮದ್ದು ಇಂದು ತಲುಪಿದೆ. ಬೆಳಿಗ್ಗೆ ನೆಡುಂಬಾಶ್ಶೇರಿಗೆ ತಲುಪಿದ ವ್ಯಾಕ್ಸಿನ್ ಶೀತಲೀಕರಣ ವ್ಯವಸ್ಥೆ ಇರುವ ಪ್ರತ್ಯೇಕ ವಾಹನದಲ್ಲಿ ಕೊಚ್ಚಿ ರೀಜ ನಲ್ ಸ್ಟೋರ್‌ನಲ್ಲಿ ಸಂಗ್ರಹಿಸಿಡ ಲಾಯಿತು. ಮಲಬಾರ್ ವಲಯ ಕ್ಕೂ ಇಲ್ಲಿಂದಲೇ ವಿತರಿಸಲಾಗು ವುದು.

೪,೩೫,೫೦೦ ಡೋಸ್ ಔಷಧಿ ಕೇರಳಕ್ಕೆ ಮಂಜೂರು ಮಾಡಲಾಗಿದೆ. ಇದರಲ್ಲಿ ೧೧೦೦ ಡೋಸ್ ಮಾಹಿಯಲ್ಲಿ ವಿತರಿಸಲಿರುವುದಾಗಿದೆ.  ತಿರುವನಂತಪುರದಲ್ಲಿ ೧,೩೪,೦೦೦, ಎರ್ನಾಕುಳಂನಲ್ಲಿ ೧,೮೦,೦೦೦, ಕಲ್ಲಿಕೋಟೆಗೆ ೧,೧೯,೫೦೦ ಡೋಸ್ ಚುಚ್ಚುಮದ್ದು ತಲುಪಿಸಲಾಗುತ್ತಿದೆ. ಸಂಜೆ ಆರು ಗಂಟೆ ವೇಳೆಗೆ ದ್ವಿತೀಯ ಬ್ಯಾಚ್ ಆಗಿ ಉಳಿದ ಔಷಧಿಗಳು ತಲುಪಲಿದೆ. ರಾಜ್ಯದಲ್ಲಿ ೧೧೩ ಕೇಂದ್ರಗಳಲ್ಲಿ ಪ್ರತಿರೋಧ ಚುಚ್ಚುಮದ್ದು ನೀಡಲಾಗುವುದು. ೩,೫೯,೫೪೯ ಆರೋಗ್ಯ ಕಾರ್ಯಕರ್ತರು ಹೆಸರು ನೋಂದಾಯಿಸಿದ್ದಾರೆ.

ಇದೇ ವೇಳೆ ಶನಿವಾರ ಆರಂಭಗೊಳ್ಳುವ ಕೋವಿಡ್ ವ್ಯಾಕ್ಸಿನೇಶನ್‌ಗಿರುವ ಔಷಧಿ ಶುಕ್ರವಾರದೊಳಗೆ ದೇಶದ ಎಲ್ಲಾ ಭಾಗಗಳಿಗೂ ತಲುಪಿಸಲಾಗುವುದೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೇಂದ್ರದ ವಿನಂತಿ ಮೇರೆಗೆ ಮೊದಲ ಸಾವಿರ ಮಿಲಿಯನ್ ಡೋಸ್ ವ್ಯಾಕ್ಸಿನ್ ಮಾತ್ರವೇ ೨೦೦ ರೂಪಾಯಿ ದರದಲ್ಲಿ ನೀಡಲಾಗುವುದೆಂದು ಸೆರಂ ಇನ್‌ಸ್ಟಿಟ್ಯೂಟ್ ತಿಳಿಸಿದೆ.

NO COMMENTS

LEAVE A REPLY