ಯುಡಿಎಫ್ ಅಧಿಕಾರಕ್ಕೆ ಬಂದರೆ ಲೈಫ್ ಇನ್ನಷ್ಟು ಉತ್ತಮವಾಗಿ ಜ್ಯಾರಿ-ಕೆಪಿಸಿಸಿ ಅಧ್ಯಕ್ಷ

0
35

ಕಾಸರಗೋಡು: ರಾಜ್ಯದಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದರೆ ಲೈಫ್ ವಸತಿ ನಿರ್ಮಾಣ ಯೋಜನೆಯನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಮುಂದುವರಿಸಲಾಗು ವುದು. ಈ ಯೋಜನೆಯಿಂದ ಬಡವರಿಗೆ ಪ್ರಯೋಜನವಾಗಬೇಕು. ಅದೇ ರೀತಿಯಲ್ಲಿ ಇದನ್ನು ಭ್ರಷ್ಟಾಚಾರ ರಹಿತ ಗೊಳಿಸಬೇಕೆಂಬು ದಾಗಿದೆ ಯುಡಿಎಫ್‌ನ ಬೇಡಿಕೆ ಎಂದು  ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ನುಡಿದರು. ಕಾಂಗ್ರೆಸ್ ನಾಯಕತ್ವ ಸಭೆಯಲ್ಲಿ ಭಾಗವಹಿಸಲು ಕಾಸರಗೋಡಿಗೆ ಆಗಮಿಸಿದ ಅವರು ಇಂದು ಬೆಳಿಗ್ಗೆ  ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ಪ್ರಚಾರದಂಗವಾಗಿ ಕಾಸರಗೋಡಿಗೆ ಆಗಮಿಸಿದ್ದ  ಕಾಂಗ್ರೆಸ್ ನೇತಾರ ಎಂ.ಎಂ. ಹಸನ್ ಅವರು ಲೈಫ್ ವಿಷಯಕ್ಕೆ ಸಂಬಂಧಿಸಿ ನೀಡಿದ ಹೇಳಿಕೆ  ವಿವಾದಕ್ಕೀಡಾಗಿತ್ತು. ಅದುವೇ ಚುನಾವಣೆಯಲ್ಲಿ ಪಕ್ಷಕ್ಕೆ ತಿರುಗೇಟುಂಟಾಗಲು ಕಾರಣವೆಂದು ಅಂದಾಜಿಸಲಾಗಿತ್ತು.

NO COMMENTS

LEAVE A REPLY