ಉಸಿರಾಟ ತೊಂದರೆ ವಿದ್ಯಾರ್ಥಿನಿ ಮೃತ್ಯು

0
58

ಬದಿಯಡ್ಕ: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟಳು.

ಕೆಡೆಂಜಿ ಮರದ ಮಿಲ್ ಸಮೀಪದ ಅಬ್ದುಲ್ ಖಾದರ್ ಎಂಬವರ ಪುತ್ರಿ ಅಸ್ಲಿಯ (೧೮) ನಿನ್ನೆ ರಾತ್ರಿ ಚೆಂಗಳದ ಆಸ್ಪತ್ರೆಯಲ್ಲಿ ಮೃತಪಟ್ಟರು. ಉಸಿರಾಟ ತೊಂದರೆಯ ಹಿನ್ನೆಲೆಯಲ್ಲಿ ನಿನ್ನೆ ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ  ತಪಾಸಣೆಗಾಗಿ ತೆರಳಿದ್ದರು. ಸಂಜೆ ಮರಳಿ ಬಂದಿದ್ದರು. ಆದರೆ ರಾತ್ರಿ ಮತ್ತೆ ಉಸಿರಾಟ ತೊಂದರೆ ಯುಂಟಾದು ದರಿಂದ ಚೆಂಗಳದ ಆಸ್ಪತ್ರೆಗೆ ತಲುಪಿಸಿ ದರೂ ಜೀವ  ರಕ್ಷಿಸಲಾಗಲಿಲ್ಲ. ಪದವಿ ಕೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದ ಅಸ್ಲಿಯ ಪ್ರವೇಶಕ್ಕಾಗಿ ಕಾಯುತ್ತಿರುವಂತೆಯೇ ನಿಧನ ಸಂಭವಿಸಿದೆ.

ಮೃತರು ತಾಯಿ ಸಬೀರ, ಸಹೋದರಿಯರಾದ ಅಲ್ಫಿನ, ಅಫೀಸ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಅವಿನಶಾನ್ ಎಂಬವರು ವರ್ಷಗಳ ಹಿಂದೆ ನೀರ್ಚಾಲ್‌ನಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದರು.

NO COMMENTS

LEAVE A REPLY