ವಿಪಕ್ಷ ನಾಯಕರಾಗಿ ರಮೇಶ್ ಚೆನ್ನಿತ್ತಲ ನಾಳೆ ಆಯ್ಕೆ ಸಾಧ್ಯತೆ

0
87

ತಿರುವನಂತಪುರ: ವಿಧಾನಸಭಾ ಚುನಾವಣೆ ನಡೆದು ಪಿಣರಾಯಿ ವಿಜಯನ್‌ರ ನೇತೃತ್ವದ ನೂತನ ಎಡರಂಗ ಸರಕಾರ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ್ದರೂ, ವಿಪಕ್ಷ ನಾಯಕರ ಆಯ್ಕೆ ಈತನಕ ನಡೆದಿಲ್ಲ.

ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೇವಲ ೨೨ ಮಂದಿ ಮಾತ್ರವೇ ಗೆದ್ದು ಬಂದಿದ್ದಾರೆ. ಅದರಲ್ಲಿ ಬಹುಪಾಲು ಮಂದಿ ‘ಐ’ ಬಣಕ್ಕೆ ಸೇರಿದವರಾಗಿದ್ದಾರೆ.

ಚುನಾವಣೆಯಲ್ಲಿ ಯುಡಿಎಫ್‌ಗೆ ಉಂಟಾಗಿರುವ ಭಾರೀ ಸೋಲಿನ ಹೊಣೆಗಾರಿಕೆಯನ್ನು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರೇ  ಸ್ವತಃ ವಹಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ವಿಪಕ್ಷ ಸ್ಥಾನ ವಹಿಸಿಕೊಳ್ಳಲು ಅವರು ಆಸಕ್ತಿ ತೋರದ ನಿಲುವನ್ನು ವ್ಯಕ್ತಪಡಿಸಿದ್ದಾರೆ.  ಇದೇ ವೇಳೆ  ಶಾಸಕರಲ್ಲಿ ಹೆಚ್ಚಿನವರು ಐ ಬಣಕ್ಕೆ ಸೇರಿದವರಾಗಿರುವ ಹಿನ್ನೆಲೆಯಲ್ಲಿ   ತಮ್ಮ ಬಣದ ನಾಯಕ ರಮೇಶ್ ಚೆನ್ನಿತ್ತಲರನ್ನು ವಿಪಕ್ಷ  ನಾಯಕರನ್ನಾಗಿ ಸಬೇಕೆಂಬ ಬೇಡಿಕೆಯನ್ನು ಐ ಬಣದವರು ಈಗಾಗಲೇ ಮುಂದಿರಿಸಿದ್ದಾರೆ. ಆದರೆ ಉಮ್ಮನ್  ಚಾಂಡಿಯವರನ್ನೇ ವಿಪಕ್ಷ ನಾಯಕರಾಗಿಸಬೇಕೆಂಬ ಬೇಡಿಕೆಯನ್ನು ಎ ಬಣದವರೂ ಮುಂದಿರಿಸಿದ್ದಾರೆ. ಇದುವೇ ವಿರೋಧಪಕ್ಷ ನಾಯಕರ ಆಯ್ಕೆ ಇನ್ನೂ ನಡೆಯದಿರಲು ಪ್ರಧಾನ ಕಾರಣವಾಗಿದೆ. ಈ ವಿಷಯ ಈಗ ಕಾಂಗ್ರೆಸ್ ಹೈಕಮಾಂಡ್ ನ ಅಂಗಳಕ್ಕೇರಿದ್ದು, ಅದರಿಂದಾಗಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನ ಈ ವಿಷಯದಲ್ಲಿ ಅಂತಿಮವಾಗಲಿದೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ನಾಳೆ ತಿರುವನಂ ತಪುರದಲ್ಲಿ ನಡೆಯಲಿದೆ.  ವಿರೋಧಪಕ್ಷ ನಾಯಕನ ಆಯ್ಕೆ ಒಂದು ಸಮಸ್ಯೆಯಾಗಿ ತಲೆಯೆತ್ತದೆ ಒಮ್ಮತದ ಆಯ್ಕೆ ನಡೆಯುವಂತೆ ಮಾಡುವ ಪ್ರಯತ್ನವೆಂಬಂತೆ ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ ವಿ.ಎಂ. ಸುಧೀರನ್ ಅವರು  ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲರೊಂದಿಗೆ ಈಗಾಗಲೇ  ಪ್ರತ್ಯೇಕ ಚರ್ಚೆ ಆರಂಭಿಸಿದ್ದಾರೆ.  ಆ ಹಿನ್ನೆಲೆಯಲ್ಲಿ ನಾಳೆ ನಡೆಯುವ ಶಾಸಕಾಂಗ ಪಕ್ಷ ಸಭೆಯಲ್ಲಿ ಪರಸ್ಪರ ಹೊಂದಾಣಿಕೆ ಬಂದು ರಮೇಶ್ ಚೆನ್ನಿತ್ತಲ ಅವರು ವಿರೋಧಪಕ್ಷ ನಾಯಕರಾಗಿ  ಆರಿಸಲ್ಪಡುವ ಸಾಧ್ಯತೆಯಿದೆ.

ಶಾಸಕಾಂಗ ಪಕ್ಷ ಸಭೆ  ತಿರುವನಂv ಪುರದಲ್ಲಿರುವ ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಾಳೆ ಬೆಳಿಗ್ಗೆ ೧೧ ಗಂಟೆಗೆ  ಆರಂಭಗೊಳ್ಳಲಿದೆ. ಅದರಲ್ಲಿ ಕಾಂಗ್ರೆಸ್

NO COMMENTS

LEAVE A REPLY