ಯುವಕ ನಾಪತ್ತೆ

0
47

ಕಾಸರಗೋಡು:  ಮುಟ್ಟತ್ತೋಡಿ ನಾಲ್ಕನೇ ಮೈಲ್ ಪಾಣಾರ್‌ಕುಳಂ ನಿವಾಸಿ ಕೆ.ಕೆ. ಅಬ್ದುಲ್ಲರ ಪುತ್ರ ಅಬೂಬಕರ್ (೨೩) ಈ ತಿಂಗಳ ೬ರಿಂದ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮೇಲ್ಪರಂಬದ ಗೆಳೆಯರ ಮನೆಗೆಂದು ತಿಳಿಸಿ ಮನೆಯಿಂದ ಹೊರಟಿದ್ದ ಇವರು ಬಳಿಕ ಹಿಂತಿರುಗಲಿಲ್ಲ ಎಂದು ವಿದ್ಯಾನಗರ ಪೊಲೀಸರಿಗೆ ಮನೆಯವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದರೆ ವಿದ್ಯಾನಗರ ಠಾಣೆಯ ೦೪೯೯೪-೨೫೬೭೬೬ರಲ್ಲಿ ತಿಳಿಸಲು ಪೊಲೀಸರು ಕರೆ ನೀಡಿದ್ದಾರೆ.

NO COMMENTS

LEAVE A REPLY