ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್: ಇನ್ನಷ್ಟು ಬಿಗು ನಿಯಂತ್ರಣ

0
83

ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇದರಿಂದಾಗಿ ಪ್ರತಿದಿನಪರಿಶೋಧನೆಯನ್ನು ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಬಿಗು ನಿಯಂತ್ರಣ ಏರ್ಪಡಿಸಲಾಗಿದೆ.

ಕಳೆದ ೧೫ ದಿನಗಳಿಂದ ಕೇರಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಮಹಾರಾಷ್ಟ್ರವನ್ನು ಬಿಟ್ಟರೆ ನಂತರದ ಸ್ಥಾನ ಕೇರಳದ್ದಾಗಿದೆ. ಕೋವಿಡ್ ಬಾಧಿಸಿ ಸಾವನ್ನಪ್ಪುವವರ ಸಂಖ್ಯೆಯೂ ರಾಜ್ಯದಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಪಾಸಣೆ ತೀವ್ರಗೊಳಿಸಲು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ನಿಯಂತ್ರಣಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಕೋವಿಡ್  ಮಾನ ದಂಡಗಳನ್ನು ಕಡ್ಡಾಯವಾಗಿ ಪಾಲಿಸು ವಂತೆ ಆರೋಗ್ಯ ಇಲಾಖೆ ನೋಡಿ ಕೊಳ್ಳಬೇಕಾಗಿ ತಿಳಿಸಲಾಗಿದೆ. ಶಾರೀರಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸ ಲಾಗಿದೆ. ಕಂಟೈನ್ಮೆಂಟ್ ವಲಯದಲ್ಲಿ ಇನ್ನಷ್ಟು ನಿಯಂತ್ರಣ ಏರ್ಪಡಿಸಲಾಗು ವುದು.  ಪ್ರತಿದಿನ ಕೋವಿಡ್  ತಪಾಸಣೆ ಯನ್ನು ಒಂದು ಲಕ್ಷವಾಗಿ ಹೆಚ್ಚಿಸಲಾಗು ವುದು. ಅನ್ಯರಾಜ್ಯ ಕಾರ್ಮಿಕರ ಶಿಬಿರಗಳು, ಗೇರುಬೀಜ ಕಾರ್ಖಾನೆ ಸಹಿತ ಒಟ್ಟಾಗಿ ಕೆಲಸ ಮಾಡುವ ಕಡೆಗಳಲ್ಲಿ ನಿಯಂತ್ರಣ ಏರ್ಪಡಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಸ್ಥಿತಿ ಆತಂಕಕಾರಿಯಾಗಿದೆಯೆಂದು ಆರೋಗ್ಯ ತಜ್ಞರು ತಿಳಿಸುತ್ತಿದ್ದಾರೆ. ಎರಡು ವಾರಗಳೊಳಗೆ ರೋಗಿಗಳ ಸಂಖ್ಯೆ ಇಮ್ಮಡಿಯಾಗಲಿದೆ ಯೆಂದೂ ತಜ್ಞರು ಮುನ್ಸೂಚನೆ ನೀಡಿದ್ದಾರೆ. ರಾಜ್ಯದ ೯ ಜಿಲ್ಲೆಗಳಲ್ಲಿ ಟೆಸ್ಟ್ ಪೊಸಿಟಿವಿಟಿ ದರ ೧೦ ಶೇ. ದಾಟಿದೆ. ಇದೇ ವೇಳೆ ಸಿನಿಮಾ ಥಿಯೇಟರ್, ಈಜುಕೊಳ ಮೊದಲಾ ದೆಡೆ ಹೆಚ್ಚು ಮಂದಿಗೆ ಭಾಗವಹಿಸಲು ಸರಕಾರ ಅನುಮತಿ ನೀಡಿರುತ್ತದೆ.

ರಾಜ್ಯದಲ್ಲಿ ನಿನ್ನೆ ೫೬೫೯ ಮಂದಿಗೆ ಕೋವಿಡ್ ದಢೀಕರಿಸಲಾಗಿದೆ. ಈ ಪೈಕಿ ೫೧೪೬ ಮಂದಿಗೆ ಸಂಪರ್ಕ ಮೂಲಕ ರೋಗ ಬಾಧಿಸಿದೆ. ಇತ್ತೀಚೆಗಿನಿಂದ ಅಸೌಖ್ಯ ಬಾಧಿಸಿ ಮೃತಪಟ್ಟವರ ಪೈಕಿ ೨೦ ಮಂದಿಗೆ ಕೋವಿಡ್ ದೃಢೀಕರಿಸಿದ್ದು, ಇದರಿಂದ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ ೩೬೬೩ಕ್ಕೇರಿದೆ.

NO COMMENTS

LEAVE A REPLY