ಬದಿಯಡ್ಕ: ನ್ಯಾಯಾಲ ಯದಿಂದ ಜಾಮೀನು ಪಡೆದು ತಲೆಮರೆಸಿಕೊಂಡ ವಾರಂಟ್ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮುಂಡಿತ್ತಡ್ಕ ಸಮೀಪದ ಉರ್ಮಿ ನಿವಾಸಿ ಮುಹಮ್ಮದ್ ನಿಸಾರ್ (೩೧) ಬಂಧಿತ ವ್ಯಕ್ತಿ. ೨೦೦೮ರಲ್ಲಿ ನಡೆದ ಹತ್ಯೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ ಜಾಮೀನು ಪಡೆದು ಅನಂತರ ನ್ಯಾಯಾಲ ಯದಲ್ಲಿ ಹಾಜರಾಗದೆ ತಲೆಮರೆಸಿ ಕೊಂಡಿದ್ದನೆನ್ನಲಾಗಿದೆ. ಬದಿಯಡ್ಕ ಎಸ್ಐ ಅನೀಶ್ ಕೆ. ಅವರ ನೇತೃತ್ವದಲ್ಲಿ ಬಂಧನ ನಡೆದಿದೆ.