ಕಾಸರಗೋಡು: ನೇಣುಬಿಗಿದು ಆತ್ಮಹತ್ಯೆಗೈಯ್ಯುವ ಮಧ್ಯೆ ಬಾವಿಗೆ ಬಿದ್ದು ಬೇಕಲ ನಿವಾಸಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೇಕಲ ಚೆರ್ಕಪಾರ ನಿವಾಸಿ ಕೃಷ್ಣ (೭೫) ಸಾವನ್ನಪ್ಪಿದ ವ್ಯಕ್ತಿ. ನಿನ್ನೆ ಮಧ್ಯಾಹ್ನ ಇವರು ಮನೆಯಂಗಳದ ಬಾವಿಯ ಅಡ್ಡದಲ್ಲಿ ನೇಣುಬಿಗಿದು ಆತ್ಮಹತ್ಯೆಗೈಯ್ಯುವ ಮಧ್ಯೆ ಬಾವಿಗೆ ಬಿದ್ದಿದ್ದರೆನ್ನಲಾಗಿದೆ. ಗಂಭೀರ ಗಾಯಗೊಂಡ ಇವರು ಬಾವಿಯ ಲ್ಲಿಯೇ ಕೊನೆಯುಸಿರೆಳೆದರು. ಮೃತರು ಪತ್ನಿ ನಾರಾ ಯಣಿ, ಮಕ್ಕಳಾದ ರಾಧಿಕಾ, ರಜಿದಾ, ಅಳಿಯ ಅಭೀಷ್ ಕುಮಾರ್ ಎಂಬವರನ್ನು ಅಗಲಿದ್ದಾರೆ.