ವಯರಿಂಗ್ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

0
151

ಆದೂರು: ವಯರಿಂಗ್ ಕಾರ್ಮಿಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಆಲಂತಡ್ಕ ನಿವಾಸಿ ಕಿಶೋರ್ (೪೨) ಸಾವನ್ನ ಪ್ಪಿದ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮನೆ ಯೊಳಗೆ ಇವರ ಮೃತದೇಹ ಕಂಡು ಬಂದಿದೆ. ಪುತ್ತೂರು ನಿವಾಸಿಯಾದ ಕಿಶೋರ್, ಆಲಂತಡ್ಕದಿಂದ ಮದುವೆಯಾಗಿದ್ದು, ಅಲ್ಲಿಯೇ ಬೇರೆ ಮನೆ ಮಾಡಿದ್ದರು. ಮೃತರು ಪತ್ನಿ ಅರ್ಚನ, ಮಕ್ಕಳಾದ ಅಖಿಲ್, ಆಶಾ, ಸಹೋದರ-ಸಹೋ ದರಿಯರಾದ ಲಕ್ಷ್ಮೀಶ, ಲತಾ, ಭಾರತಿ ಎಂಬವರನ್ನು ಅಗಲಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

NO COMMENTS

LEAVE A REPLY