ತಿಲ್ಲಂಗೇರಿ ಮಾದರಿ ಪುನರಾವರ್ತಿಸಲು ಸಿಪಿಎಂ-ಬಿಜೆಪಿಯಲ್ಲಿ ಹೊಂದಾಣಿಕೆ-ಮುಲ್ಲಪ್ಪಳ್ಳಿ

0
127

ಮಲಪ್ಪುರಂ: ತಿಲ್ಲಂಗೇರಿ ಮಾದರಿಯನ್ನು   ವಿಧಾನಸಭಾ ಚುನಾವಣೆಯಲ್ಲೂ ಪುನರಾವರ್ತಿ ಸಲು ಸಿಪಿಎಂ-ಬಿಜೆಪಿ ಮಧ್ಯೆ ಹೊಂದಾಣಿಕೆಯುಂಟಾಗಿದೆಯೆಂದು ಈ ಬಗ್ಗೆ ಅಲ್ಪಸಂಖ್ಯಾತರು ಜಾಗ್ರತೆ ವಹಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ತಿಳಿಸಿದ್ದಾರೆ.

ಸ್ಥಳೀಯಾಡಳಿತ ಚುನಾವಣೆ ಯಲ್ಲಿ ಕಾಸರಗೋಡಿನಿಂದ ತಿರುವನಂತಪುರದ ವರೆಗೆ ಮತ  ವ್ಯಾಪಾರಕ್ಕೆ ಸಿಪಿಎಂ-ಬಿಜೆಪಿ ಧೋರಣೆ ಮಾಡಿಕೊಂಡಿತ್ತು. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಇದನ್ನು ವಿಧಾನಸಭಾ ಚುನಾವಣೆಯಲ್ಲಿ ಪುನರಾವರ್ತಿಸಲು ಸಾಧ್ಯತೆಯಿದೆಯೆಂದು ಮುಲ್ಲಪ್ಪಳ್ಳಿ ಮಲಪ್ಪುರಂನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಿಳಿಸಿದ್ದಾರೆ. ತಿಲ್ಲಂಗೇರಿ ಉಪಚುನಾವಣೆ ಇದಕ್ಕೆ ಕೊನೆಯ ಉದಾಹರಣೆ ಎಂದವರು ತಿಳಿಸಿದರು. ಆರ್‌ಎಸ್‌ಎಸ್ ಮುಖಂಡ ವತ್ಸನ್ ತಿಲ್ಲಂಗೇರಿಯವರ ಊರಾಗಿದೆ ಇದು.  ಇಲ್ಲಿ  ಬಿಜೆಪಿಗೆ ೨೦೦೦ದಷ್ಟು ಮತಗಳು ಕಡಿಮೆ ಯಾಗಿರುವುದು, ಸಿಪಿಎಂ ಜಯ ಗಳಿಸಿರುವುದು ಇದಕ್ಕೆ ಪುರಾವೆಯೆಂದು ಮುಲ್ಲಪಳ್ಳಿ ನುಡಿದರು.

NO COMMENTS

LEAVE A REPLY