ಮದ್ಯಪಾನಿ ತಂಡಗಳ ಮಧ್ಯೆ ಹೊಡೆದಾಟ:ಕಾಸರಗೋಡು ಪರಿಸರ ನಿವಾಸಿಗಳ ಸಹಿತ ೧೦ ಮಂದಿ ಮಂಜೇಶ್ವರದಲ್ಲಿ ಸೆರೆ; ೧೫ ಮಂದಿಗೆ ಕೇಸು

0
159

ಮಂಜೇಶ್ವರ: ಪರಸ್ಪರ ಹೊಡೆ ದಾಡಿದ ೧೫ ಮಂದಿಯ ತಂಡದಲ್ಲಿ ೧೦ ಮಂದಿಯನ್ನು ಸೆರೆಹಿಡಿದು ೧೫ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ನಿನ್ನೆ ರಾತ್ರಿ ೧೦ ಗಂಟೆಗೆ ಕುಂಜತ್ತೂರುಪದವು ಒಳರಸ್ತೆಯಲ್ಲಿ ಘಟನೆ ನಡೆದಿದೆ. ಕಾಸರಗೋಡು ಪರಿಸರ ನಿವಾಸಿಗಳಾದ ೧೫ ಮಂದಿ ೩ ಕಾರುಗಳಲ್ಲಾಗಿ ಕುಂಜತ್ತೂರುಪದವು ಒಳರಸ್ತೆಯ ಗಡಿಯಲ್ಲಿರುವ ಬಾರ್‌ನಿಂದ ಮದ್ಯ ಸೇವಿಸಿ ಹಿಂತಿರುಗುವ ವೇಳೆ ಘರ್ಷಣೆ ಉಂಟಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಇವರಲ್ಲಿ ಕೂಡ್ಲು ಕೃಷ್ಣ ನಿಲಯದ ಚರಣ್‌ರಾಜ್ ಶೆಟ್ಟಿ (೨೫), ಸಣ್ಣಮನೆ ಕೂಡ್ಲು ನಿವಾಸಿ ಅಜಯ್ ಕುಮಾರ್ ಶೆಟ್ಟಿ (೨೨), ಕೂಡ್ಲು ಸಂದೀಪ್ ಪಿ.ಎಂ (೨೭), ಅಣಂಗೂರು ನಿವಾಸಿ ಸುಭಾಷ್.ಎಂ (೨೩), ನೆಲ್ಕಳ ಕಾಲನಿ ನಿವಾಸಿ ವಿಷ್ಣು ಪ್ರಸಾದ್ (೧೯), ಕಾಳ್ಯಂಗಾಡು ನಿವಾಸಿ ಸಂದೀಪ್.ಕೆ (೨೩), ಉಪ್ಪಳ ಐಲಗೇಟ್ ನಿವಾಸಿ ಅಂಕೇಶ್ (೨೫), ವಿದ್ಯಾನಗರ ನಿವಾಸಿ ಪ್ರಶಾಂತ್ (೨೬), ಪಾರೆಕಟ್ಟೆ ನಿವಾಸಿ ಕೌಶಿಕ್ (೨೨), ಅಣಂಗೂರು ನಿವಾಸಿ ಸಜಿತ್ (೨೬)ನನ್ನು ಸೆರೆಹಿಡಿಯ ಲಾಗಿದೆ. ಉಳಿದ ೫ ಮಂದಿ ಒಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಎರಡು ಕಾರನ್ನು ವಶಪಡಿಸಿದ್ದಾರೆ. ಇದರಲ್ಲಿ ಒಂದು ಕಾರಿಗೆ ಹಾನಿಯಾಗಿದೆ. ತಂಡ ಪರಸ್ಪರ ಹೊಡೆದಾಡುತ್ತಿದ್ದ ಮಾಹಿತಿ ತಿಳಿದು ಮಂಜೇಶ್ವರ ಠಾಣೆಯ ಎಸ್‌ಐ ರಾಘವನ್ ಸ್ಥಳಕ್ಕೆ ತೆರಳಿದ್ದು, ಅವರು ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY