ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು

0
186

ಉಪ್ಪಳ: ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕ ಉತ್ತರ ಪ್ರದೇಶ ನಿವಾಸಿಯೆಂದು ಅಂದಾಜಿಸಲಾಗಿದೆ. ಮೃತದೇಹದ ಜೇಬಿನಿಂದ ಲಭಿಸಿದ ಚುನಾವಣೆ ಗುರುತು ಚೀಟಿಯಲ್ಲಿ ಉತ್ತರ ಪ್ರದೇಶ ನಿವಾಸಿ ರಾಮ ರಕ್ಷಾ (೨೭) ಎಂದು ತಿಳಿದು ಬಂದಿದೆ. ನಿನ್ನೆ ಸಂಜೆ ೩.೩೦ರ ವೇಳೆ ಉಪ್ಪಳ ರೈಲ್ವೇ ಗೇಟ್ ಸಮೀಪ ಘಟನೆ ನಡೆದಿದೆ. ಮಂಗಳೂರಿನಿಂದ ಕಣ್ಣೂರು ಭಾಗಕ್ಕೆ ತೆರಳುವ ರೈಲು ಢಿಕ್ಕಿ ಹೊಡೆದಿರಬೇಕೆಂದು ಶಂಕಿಸಲಾಗಿದೆ.

ಈ ವ್ಯಕ್ತಿ ಹೆಡ್‌ಫೋನ್ ಇಟ್ಟುಕೊಂಡು ಹಳಿಯಲ್ಲಿ ತೆರಳುತ್ತಿದ್ದುದಾಗಿ ಹಳಿ ದುರಸ್ತಿ ಕಾರ್ಮಿಕರೋರ್ವರು ಪೊಲೀಸರಿಗೆ ತಿಳಿಸಿದ್ದಾರೆ. ಮಂಜೇಶ್ವರ ಸ್ಟೇಷನ್ ಮಾಸ್ಟರ್ ನೀಡಿದ ಮಾಹಿತಿಯಂತೆ ಎಸ್.ಐ. ರಾಘವನ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದವರು ಮಂಜೇಶ್ವರ ಠಾಣೆಯ ೯೪೯೭೯೨೮೮೦೦ ಎಂಬ ನಂಬ್ರಕ್ಕೆ ಕರೆ ಮಾಡಿ ತಿಳಿಸಬೇ ಕೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY