ಜ್ಯುವೆಲ್ಲರಿ ಠೇವಣಿ ವಂಚನೆ: ತನಿಖೆ ನೂತನ ಡಿವೈಎಸ್ಪಿಗೆ ಹಸ್ತಾಂತರ

0
200

ಕಾಸರಗೋಡು: ಮಂಜೇಶ್ವರ ಶಾಸಕ ಎಂ.ಸಿ ಖಮರುದ್ದೀನ್ ಆರೋಪಿಯಾಗಿರುವ ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನಾ ಪ್ರಕರಣವನ್ನು ನೂತನವಾಗಿ ಬಂದ ಡಿವೈಎಸ್ಪಿಗೆ ಹಸ್ತಾಂತರಿಸಲಾಗಿದೆ. ಕ್ರೈಂ ಬ್ರಾಂಚ್ ಡಿವೈಎಸ್ಪಿ ಪಿ.ಕೆ. ದಾಮೋದರನ್ ನೂತನವಾಗಿ ಬಂದ ಸುನಿಲ್ ಕುಮಾರ್ ಡಿವೈಎಸ್ಪಿಗೆ ತನಿಖೆಯನ್ನು ಹಸ್ತಾಂತರಿಸಿದ್ದಾರೆ.

ಫ್ಯಾಶನ್ ಗೋಲ್ಡ್ ಠೇವಣಿ ವಂಚನಾ ಪ್ರಕರಣದಲ್ಲಿ ಬಂಧಿತನಾದ ಶಾಸಕ ಎಂ.ಸಿ. ಖಮರುದ್ದೀನ್ ಇದೀಗ ರಿಮಾಂಡ್‌ನಲ್ಲಿದ್ದಾರೆ. ಇವರ ವಿರುದ್ಧ ೧೫೫ ವಂಚನಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ೮೧ ಪ್ರಕರಣಗಳಲ್ಲಿ ಶಾಸಕರಿಗೆ ಜಾಮೀನು ಲಭಿಸಿದೆ. ಪ್ರಕರಣದ ಮುಖ್ಯ ಆರೋಪಿಗಳು ಈಗಲೂ ತಲೆಮರೆಸಿಕೊಂಡಿದ್ದಾರೆ.

NO COMMENTS

LEAVE A REPLY