ಟೆರೇಸಿನಿಂದ ಬಿದ್ದು ಗಾಯಗೊಂಡ ನಿರ್ಮಾಣ ಕಾರ್ಮಿಕ ನಿಧನ

0
35

ಬದಿಯಡ್ಕ: ಕಟ್ಟಡದ ಮೇಲಿನಿಂದ ಬಿದ್ದು ಗಂಭೀರ ಗಾಯಗೊಂಡ ಕರ್ನಾಟಕ ನಿವಾಸಿ ಪರಿಯಾರಂ ಮೆಡಿಕಲ್ ಕಾಲೇಜು  ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಕರ್ನಾಟಕ ಗದಗ ಬಿಜೂರು ನಿವಾಸಿ ಶೇಷಪ್ಪ (೫೧) ಸಾವನ್ನಪ್ಪಿದ ಕಾರ್ಮಿಕನಾಗಿದ್ದಾರೆ. ಕಳೆದ ಬುಧವಾರದಂದು ಕುಂಬ್ಡಾಜೆಯ ಕರುವಲ್ತಡ್ಕದಲ್ಲಿ ಈ ದುರ್ಘಟನೆ ನಡೆದಿದೆ. ಇಲ್ಲಿನ ಖಾಸಗಿ ವ್ಯಕ್ತಿಯೋರ್ವರ ಮನೆಯ ಟೆರೇಸ್ ಮೇಲೆ ಕೆಂಪುಕಲ್ಲು ಕೊಂಡೊಯ್ಯುತ್ತಿದ್ದಾಗ ಕಾಲು ಜಾರಿ ಬಿದ್ದರೆನ್ನಲಾಗಿದೆ. ಈ ವೇಳೆ ಕೆಳಗೆ ಬಿದ್ದ ಶೇಷಪ್ಪರ ಮೇಲೆ ಕಲ್ಲು ಬಿದ್ದಿದ್ದು ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಕಾಸರಗೋಡು ಆಸ್ಪತ್ರೆಗೂ, ಅನಂತರ ಪರಿಯಾರಂ ಮೆಡಿಕಲ್ ಆಸ್ಪತ್ರೆಗೂ ದಾಖಲಿಸಲಾಯಿತು. ಪರಿಯಾರಂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂದು ಪೋಸ್ಟ್ ಮಾರ್ಟಂ ನಡೆಸಿ ಮೃತದೇಹವನ್ನು ಸಂಬಂಧಿ ಕರಿಗೆ ಹಸ್ತಾಂತರಿಸಲಾಗುವುದು. ಮೃತರು ಪತ್ನಿ ಎಲ್ಲಮ್ಮ, ಮಕ್ಕಳಾದ ಗಣೇಶ್, ನಾಗರಾಜ, ಸಹೋದರ ಶಿವಣ್ಣ ಎಂಬವರನ್ನು ಅಗಲಿದ್ದಾರೆ.

NO COMMENTS

LEAVE A REPLY